ಬಳ್ಳಾರಿ: ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲ ಮುಖ್ಯಮಂತ್ರಿ ಆಗುವವರೇ? ನಾನು ಸಿಎಂ, ನಾನು ಸಿಎಂ ಎಂದು 224 ಜನರೂ ಹೇಳುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಶಾಸಕ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಇನ್ನೂ ರಾಜಕಾರಣದಲ್ಲಿ ಕಣ್ಣು ಬಿಡದ ಪ್ರಿಯಾಂಕ್ ಸಿಎಂ ಅಂತಿದ್ದಾರೆ. ಇನ್ನು ಪ್ರಿಯಾಂಕ್ ಖರ್ಗೆ ತಂದೆ ಹೆಸರು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದೆ.
“ದೀರ್ಘಕಾಲದ ಬೆನ್ನು ನೋವು” ಇಲ್ಲಿದೆ ಸರಳ ಚಿಕಿತ್ಸೆ: ಪರಿಹಾರ, ಉಚಿತ ಸಲಹೆ
ಮಲ್ಲಿಕಾರ್ಜುನ ಖರ್ಗೆಯನ್ನೇ ಸಿಎಂ ಆಗಲು ಬಿಟ್ಟಿಲ್ಲ, ಇವರನ್ನು ಬಿಡ್ತಾರಾ? ಸತೀಶ್ ಜಾರಕಿಹೊಳಿ ಕೂಡ ಮುಖ್ಯಮಂತ್ರಿ ರೇಸ್ನಲ್ಲಿದ್ದಾರೆ ಅಂತಾರೆ. ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿಯಾಗಲಿ ಎಂದು ರಾಜಣ್ಣ ಹೇಳ್ತಾರೆ. ಪರಮೇಶ್ವರ್ ದೇವರು ಅನುಗ್ರಹ ಇದ್ರೆ ಸಿಎಂ ಆಗ್ತೇನೆ ಅಂತಾ ಹೇಳ್ತಾರೆ ಎಂದು ವಾಗ್ದಾಳಿ ನಡೆಸಿದರು.