ಮಂಡ್ಯ;- ರಾಜ್ಯದಲ್ಲಿ ಮಳೆ ಕೈ ಕೊಟ್ಟ ಹಿನ್ನೆಲೆ, ನಾಲೆ ಬತ್ತಿ ಹೋಗಿದೆ. ನೀರಿನ ಸಮಸ್ಯೆಗೆ ಸಕ್ಕರೆನಾಡಿನ ರೈತರು ಕಂಗಾಲಾಗಿದ್ದಾರೆ.
ನೀರಿಲ್ಲದೆ ಬೆಳೆ ಉಳಿಸಿಕೊಳ್ಳಲು ರೈತರಿಂದ ಹರಸಾಹಸ ನಡೆಯುತ್ತಿದ್ದು, ಬೆಳೆದ ಭತ್ತದ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಗದ್ದೆಗೆ ನೀರು ಹಾಯಿಸಲಾಗುತ್ತಿದೆ. ಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಅನ್ನದಾತರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. KRS ಡ್ಯಾಂ ಅಚ್ಚುಕಟ್ಟು ಪ್ರದೇಶದ ಕಡೇ ಭಾಗ ಕೊಪ್ಪ ಹೋಬಳಿ. ಡ್ಯಾಂನಿಂದ ನಾಲೆಗೆ ನೀರು ಬಿಟ್ಟರೂ ಕೊಪ್ಪ ಹೋಬಳಿ ತಲುಪಬೇಕಾದರೆ 10ರಿಂದ12 ದಿನ ಬೇಕು. ನೀರು ತಲುಪಿ ಎರಡ್ಮೂರು ದಿನದಲ್ಲೇ ನಾಲೆಗಳಿಗೆ ನೀರು ಸ್ಥಗಿತವಾಗಿದೆ.
ಕಟ್ಟು ಪದ್ಧತಿಯಂತೆ 15 ದಿನಗಳಿಗೆ ಅಧಿಕಾರಿಗಳು ನೀರು ನಿಲ್ಲಿಸಿದ್ದಾರೆ. ಮತ್ತೊಂದೆಡೆ ಮಳೆಯೂ ಕೈಕೊಟ್ಟಿರೋದ್ರಿಂದ ಬೆಳೆ ಒಣಗುತ್ತಿದೆ. ಸಾಲಸೂಲ ಮಾಡಿ ಬೆಳೆದ ಬೇಳೆಗೆ ಟ್ಯಾಂಕರ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ. ಮಹರ್ನಾವಮಿ ದೊಡ್ಡಿ,ಗುಡಿದೊಡ್ಡಿ ಗ್ರಾಮದಲ್ಲಿ ಟ್ಯಾಂಕರ್ ಮೂಲಕ ಬೆಳೆಗೆ ನೀರು ಪೂರೈಕೆ ಮಾಡಲಾಗುತ್ತಿದೆ.
ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕೊಪ್ಪ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಗ್ರಾಮದ ರೈತ ವೆಂಕಟೇಶ್ ತಮ್ಮ ಜಮೀನಿನಲ್ಲಿ ಬೆಳೆದಿರುವ ಭತ್ತದ ಬೆಳೆ, ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ಮೂಲಕ ಹಣ ಕೊಟ್ಟು ಬೆಳೆಗೆ ರೈತ ನೀರುಣಿಸುತ್ತಿದ್ದಾರೆ. ಕೈಗೆ ಬಂದ ತುತ್ತನ್ನ ಉಳಿಸಿಕೊಳ್ಳುವಲ್ಲಿ ಹರಸಾಹಸ ರೈತ ವೆಂಕಟೇಶ್ ಹರಸಾಹಸ ಪಡುತ್ತಿದ್ದಾರೆ.
ರೈತರು 15ದಿನಕ್ಕೊಮ್ಮೆ ಬೆಳೆಗೆ 8 ಟ್ಯಾಂಕರ್ ನೀರುಣಿಸುತ್ತಿದ್ದಾರೆ. ಸುಮಾರು 800-1000ರೂ ಹಣ ಕೊಟ್ಟು ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ನಷ್ಟದ ಸುಳಿಗೆ ಸಿಲುಕಿ ಬೆಳೆ ಉಳಿಸಿಕೊಳ್ಳಲು ರೈತರು ಮುಂದಾಗಿದ್ದಾರೆ. 30 ಕುಂಟೆ ಜಮೀನಿನಲ್ಲಿ ರೈತ ಭತ್ತ ಬೆಳೆದಿದ್ದು, ತಮಿಳುನಾಡಿಗೂ ನೀರನ್ನು ಕೊಡುತ್ತೇವೆ, ರೈತರ ಬೆಳೆಗೂ ಕೂಡ ನೀರನ್ನು ಪೂರೈಸುತ್ತೇವೆ ಎಂಬ ಭರವಸೆ ನೀಡಿದ್ದ ಸರ್ಕಾರ.
ಸರ್ಕಾರದ ಬರವಸೆಯಂತೆ ನಾವು ಬೆಳೆಗಳನ್ನು ಬೇಲೆಯಲು ಪ್ರಾರಂಭಿಸಿದ್ದೆವು. ಈ ಹಿನ್ನೆಲೆಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಕೊಟ್ಟಿತೇ ವಿನಃ ನಮಗೆ ನೀರು ಕೋಡಲಿಲ್ಲ. ಹಾಗಾಗಿ ಸರ್ಕಾರವೇ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಭತ್ತ ಬರದಿದ್ರೂ ಪರವಾಗಿಲ್ಲ ಜಾನುವಾರಿಗೆ ಮೇವು ಸಿಗಲಿ ಎಂಬ ಸ್ಥಿತಿಗೆ ರೈತರು ಬಂದಿದ್ದಾರೆ. ಈಗಲಾದರೂ KRS ಅಚ್ಚುಕಟ್ಟು ಪ್ರದೇಶದ ಕಡೇ ಭಾಗಕ್ಕೆ ನೀರು ಒದಗಿಸುತ್ತಾರಾ ಅಧಿಕಾರಿಗಳು?*
ಒಣಗುತ್ತಿರುವ ಬೆಳೆ ರಕ್ಷಣೆಗೆ ಮುಂದಾಗುತ್ತಾ ಮಂಡ್ಯ ಜಿಲ್ಲಾಡಳಿತ? ಕಾದು ನೋಡಬೇಕಾಗಿದೆ.