ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮಳೆ ಬಂದರೇ ಸಾಕು ರಸ್ತೆಯಲ್ಲ ಕೆರೆಯಂತಾಗುತ್ತವೆ. ಬಹುತೇಕ ಮನೆಗಳು ಜಲಾವೃತ ಗೊಂಡು ಜನರು ಪರದಾಡುವಂತಾಗುತ್ತದೆ. ಹೌದು.. ಹುಬ್ಬಳ್ಳಿಯ ಗಣೇಶನಗರದ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ಶಾಲಾ ಮಕ್ಕಳು, ಸಾರ್ವಜನಿಕರು ನೀರಿನಲ್ಲಿಯೇ ಓಡುಡುವ ಮೂಲಕ ಸ್ಥಳೀಯ ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಅಲ್ಲದೇ ಪ್ರತಿ ಬಾರಿ ಮಳೆ ಬಂದಾಗಲೂ ಇಂತಹ ಅವ್ಯವಸ್ಥೆ ಸರ್ವೇಸಾಮಾನ್ಯವಾಗಿದೆ.
ಇನ್ನೂ ಹುಬ್ಬಳ್ಳಿಯ ಚನ್ನಪೇಟೆಯಲ್ಲಿ ಬಹುತೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ಮಳೆಯ ನೀರನ್ನು ಹೊರ ಹಾಕಲು ಹರಸಾಹಸ ಮಾಡುವಂತಾಗಿದೆ. ಯುಜಿಡಿ ಸಮಸ್ಯೆಯಿಂದ ಇಲ್ಲಿನ ಜನರ ಭವಣೆ ಹೇಳತೀರದಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪಾಲಿಕೆಯು ಸೂಕ್ತ ಕ್ರಮಗಳನ್ನು ಜರುಗಿಸಿ ಜನರ ಕಷ್ಟವನ್ನು ದೂರ ಮಾಡಬೇಕಿದೆ.
ಶಾಲಾ ಮಕ್ಕಳ ಪರದಾಟ
ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಪವನ ಸ್ಕೂಲ್ ಮಳೆಗೆ ಶಾಲಾ ಮಕ್ಕಳು ಪರದಾಟ ಮಳೆಗೆ ರಸ್ತೆ ಸಂಪರ್ಕ ಬಂದ್ ಸತತವಾಗಿ 3 ಘಂಟೆಗಳ ಕಾಲ ಮಳೆ ಬಾರಿ ಅವಾಂತರ ಆದ ಮಳೆಗೆ ಹಳೆ ಹುಬ್ಬಳ್ಳಿಯ ಇಂಡಿಪಂಪ ಹತ್ತಿರ ಇರುವ ಪವನ ಸ್ಕೂಲ್ ಶಾಲೆಯ ಮಕ್ಕಳು ಪರದಾಟವಾಗಿದೆ