ತುಮಕೂರು: ದರಿದ್ರ ಸರ್ಕಾರದಿಂದಾಗಿ ನಾವೆಲ್ಲಾ ಪೇಪರ್ ಎಂಎಲ್ಎಗಳಾಗಿದ್ದೇವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಶಾಸಕ ಸುರೇಶ್ ಗೌಡ ವಾಗ್ದಾಳಿ ಮಾಡಿದ್ದಾರೆ. ತುಮಕೂರು ತಾಲೂಕಿನ ಬೆಳ್ಳಾವಿಯಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ. ರೈತರಿಗೆ ಮರಣ ಶಾಸನ ಬರೆದ ಸಿದ್ದರಾಮಯ್ಯ ಸರಕಾರ. ಬಿಎಸ್ ವೈ ಸರಕಾರ 20 ಸಾವಿರ ಟ್ರಾನ್ಸಫರ್ಮರ್ ಅಳವಡಿಕೆ ಮಾಡಿತ್ತು.. ರೈತರಿಂದ ಹಿಡಿದು ಕೈಗಾರಿಕೋದ್ಯಮಿ ಗಳಿಂದ ಹಿಡಿದು, ಯಾರಿಗೂ ಕೂಡ ಕರೆಂಟ್ ಇಲ್ಲ, ಹೇಮಾವತಿ ನೀರಿಲ್ಲ, ಇವತ್ತು ಬೆಂಗಳೂರು ತುಮಕೂರು,ಮಂಡ್ಯ ನೀರಿಲ್ಲದೆ ತಮಿಳುನಾಡಿಗೆ ನೀರು ಬಿಟ್ಟಿದ್ದಾರೆ.
ಮಕ್ಕಳಿಗೆ ಸೈಕಲ್ ಕೊಟ್ಟಿಲ್ಲ ಅಂತ, ಯೂನಿಫಾರ್ಮ್ ಕೊಟ್ಟಿಲ್ಲ ಅಂತ ಮಕ್ಕಳು ಬಂದಿದ್ದಾರೆ. ಶಾಸಕರ ಅನುದಾನ ಕೂಡ 2 ಕೋಟಿ ಬದಲು 50 ಲಕ್ಷ ಕೊಟ್ಟಿದ್ದಾರೆ. ನಾವು ಯಾವ ಮುಖ ಇಟ್ಕೊಂಡ್ ಹೋಗೋದು. ಮೋದಿ ಕೊಡೋ ಅಕ್ಕಿನಾ ಕೂಡ ಕೊಡ್ತಾ ಇಲ್ಲ. ರಾಜ್ಯ ಸರಕಾರ ಏನ್ಮೇಕಾದ್ರು ಮಾಡ್ಕೊಳ್ಳಿ ಆದ್ರೆ ಮೋದಿ ಕೊಡ್ತಿರೋ ಅಕ್ಕಿ ಕೊಡಿ, 2 ಕೆ.ಜಿ. ಕಡಿತ ಯಾಕೆ. ನಾವೆಲ್ಲಾ ಪೇಪರ್ ಮೇಲೆ ಎಂಎಲ್ ಎ ಗಳಾಗಿದ್ದೇವೆ, ಯಾವ ಅನುದಾನವೂ ಬರುತ್ತಿಲ್ಲ. ಯಾವಾಗ ತೊಲಗುತ್ತಾ ಸರಕಾರ ಅಂತ ಕಾಯ್ತಿದ್ದೇವೆ ಎಂದು ಕಿಡಿಕಾರಿದರು.