ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಕಾರು ಚಾಲಕನನ್ನು ಬಂಧಿಸಲಾಗಿದೆ. ಪ್ರತಿಮಾ ಮೇಲಿನ ಸೇಡಿನಿಂದ ಪ್ರಾಣ ತೆಗೆದು ಕಿರಣ್ ಎಸ್ಕೇಪ್ ಆಗಿ ಇವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ. ಅಲ್ಲದೆ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ.
ಅನುಮಾನದ ಹಿನ್ನೆಲೆಯಲ್ಲಿ ಪ್ರತಿಮಾ ಅವರು ಕಾರು ಡ್ರೈವರ್ ಆಗಿದ್ದ ಕಿರಣ್ ನನ್ನು (Kiran) ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವನು ಹತ್ಯೆ ನಡೆಸಿದ್ದನ್ನು ಅಂಗೀಕರಿಸಿದ್ದಾನೆ ಎಂದು ಹೇಳಿದರು. ವೃತ್ತಿಪರ ಕಾರಣಕ್ಕಾಗಿ ಪ್ರತಿಮಾ ಕೊಲೆ ನಡೆದಿದೆ ಎಂದ ರಾಹುಲ್ ಕುಮಾರ್, ಕಿರಣ್ ಸ್ವಭಾವ ಮತ್ತು ಅಧಿಕೃತ ಮಾಹಿತಿಯನ್ನು ಬೇರೆಯವರಿಗೆ ನೀಡುತ್ತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಯು ಗುತ್ತಿಗೆ ಆಧಾರದ ಮೇಲೆ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ ನನ್ನು ಸುಮಾರು 2 ತಿಂಗಳ ಹಿಂದೆ ಕೆಲಸದಿಂದ ತೆಗೆದುಹಾಕಿದ್ದರು.
ಕೆಲಸ ಹೋದ ಕಾರಣ ಕಿರಣ್ ಹೆಂಡತಿ ಅವನನ್ನು ತೊರೆದು ತವರು ಮನೆಗೆ ಹೋಗಿದ್ದಳು, ಹೀಗೆ, ಹತಾಶೆಯ ಮಡುವಿನಲ್ಲಿದ್ದ ಅವನು ಪ್ರತಿಮಾ ಅವರನ್ನು ಕಚೇರಿಯಲ್ಲಿ ಕಂಡು ಮಾತಾಡಿ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿದ್ದಾನೆ. ಆದರೆ ಅಧಿಕಾರಿ ನಿರಾಕರಿಸಿದ್ದಾರೆ. ನಂತರ ಕಿರಣ್ ನವೆಂಬರ್ 3 ರಂದು ಪ್ರತಿಮಾರನ್ನು ಅವರ ಮನೆಯಲ್ಲಿ ಭೇಟಿ ಮಾಡಲು ಪ್ರಯತ್ನಿಸಿದ್ದಾನೆ ಆದರೆ ಸಾಧ್ಯವಾಗಿಲ್ಲ.
4ನೇ ತಾರೀಖು ಪ್ರತಿಮಾ ಮನೆಗೆ ಬರುವುದನ್ನು ಕಾಯುತ್ತಿದ್ದ ಅವನು ಅವರ ಹಿಂದೆಯೇ ಮನೆಯೊಳಗೆ ನುಗ್ಗಿ ಅವರ ದುಪ್ಪಟ್ಟಾ ಮತ್ತು ಮನೆಯಲ್ಲಿದ್ದ ಒಂದು ಆಯುಧದಿಂದ ಕೊಲೆ ಮಾಡಿದ್ದಾನೆ ಎಂದು ಡಿಸಿಪಿ ಹೇಳಿದರು.