ದಾವಣಗೆರೆ: ಕಾಂಗ್ರೆಸ್ ಸರ್ಕಾರಕ್ಕೆ ಬರಗಾಲದ ಮತ್ತು ರಾಜ್ಯ ಜನ ಜೀವನದ ಗಾಂಭೀರ್ಯತೆಯೇ ಇಲ್ಲ ಆದ್ದರಿಂದ ಬರಗಾಲದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೂಡ ತೆಗೆದುಕೊಂಡಿಲ್ಲ ಎಂದು ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಕಾವೇರಿ ವಿಚಾರದಲ್ಲೂ ನಿರ್ಲಕ್ಷ್ಯ, ಕಾನೂನು ಸುವ್ಯವಸ್ಥೆ ವಿಷಯದಲ್ಲೂ ನಿರ್ಲಕ್ಷ್ಯ, ಸರ್ಕಾರದ ಈ ನಿರ್ಲಕ್ಷ್ಯದಿಂದ ಜನರು ಸಂಕಟ ಅನುಭವಿಸುತ್ತಿದ್ದಾರೆ. ವಿದ್ಯುತ್ ಅಭಾವದಿಂದ ರೈತರು ನೋವು ಅನುಭವಿಸುತ್ತಿದ್ದಾರೆ ಎಂದರು.
ಇನ್ನೂ ನಾವು ಈ ಬಗ್ಗೆ ಕೇಳಿದ್ರೆ ಕೇಂದ್ರ ಸರ್ಕಾರ ಕೊಡ್ಲಿ ಅಂತಾರೆ. ಕೇಂದ್ರ ಸರ್ಕಾರ ತನ್ನ ಪಾಲಿನ ಅನುದಾನವನ್ನ ಕೊಟ್ಟೆ ಕೊಡತ್ತೆ. ಆದ್ರೆ ಸಿದ್ದರಾಮಯ್ಯನವರಿಗೆ ಸಿಎಂ ಸೀಟ್ ಯಾವಾಗ ಹೋಗುತ್ತೆ ಅಂತ ಚಿಂತೆ, ಡಿ ಕೆ ಶಿವಕುಮಾರ್ ಗೆ ನಾನು ಯಾವಾಗ ಸಿಎಂ ಆಗ್ತೀನಿ ಎಂಬ ಚಿಂತೆ ಹೀಗಾಗಿ ಸರ್ಕಾರರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ, ಹೈ ಕಮಾಂಡ್ ರಾಜ್ಯವನ್ನ ಎಟಿಎಂ ಮಶಿನ್ ಮಾಡಿಕೊಂಡಿದೆ. ಇದನ್ನೆಲ್ಲ ಬಿಟ್ಟು ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.