ಬಾಗಲಕೋಟೆ: ಸಿಎಂ ಬದಲಾವಣೆ ಬಗ್ಗೆ ‘ಕೈ’ ನಾಯಕರ ಗೊಂದಲ ಹೇಳಿಕೆ ವಿಚಾರ ‘ಅಧಿಕಾರ ಹಂಚಿಕೆ ಬಗ್ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬಾಗಲಕೋಟೆ ನಗರದಲ್ಲಿ ಮಾತನಾಡಿದ ಅವರು ‘ಅವರು ನಾನೇ ಇರ್ತೀನಿ ಅಂತ ಹೇಳಿದ್ದಾರೆ, ಮ್ಯಾಟರ್ ಕ್ಲೋಜ್ ಆಗಿದೆ. ಆ ಸಂದರ್ಭ ಉದ್ಭವ ಆದಾಗ ನೋಡೋಣ ಎಂದರು.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಇನ್ನೂ ಸತೀಶ್ ಜಾರಕಿಹೊಳಿ ಅವರಿಗೆ ನಾಡಿನ ದೊರೆ ಆಗುವ ಎಲ್ಲ ಅರ್ಹತೆ ಇದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ ಹೇಳಿದ್ದರು. ಈ ಮಾತಿಗೆ ಪ್ರಕತಿಕ್ರಿಯಿಸಿದ ಸಚಿವರು ‘ ಹಾಗೆ ಹೇಳಿದ್ದಾರೆ, ಅದರ ಜೊತೆಗೆ ಸಮಯ ಕಾಯಬೇಕು ಅಂತಾನು ಹೇಳಿದ್ದಾರೆ. ಕಾಯಬೇಕಾಗುತ್ತದೆ, ಅದಕ್ಕೆ ಪಕ್ಷವಿದೆ, ಶಾಸಕರು ಇದ್ದಾರೆ. ಎಲ್ಲ ಕೂಡಿ ಬಂದಾಗ ಮಾತ್ರ ಅವಕಾಶ ಎಂದರು.