ಬೆಂಗಳೂರು: ನಿಮ್ದು ಬೆಂಗಳೂರಿನಲ್ಲಿ ಸೈಟ್ ಇದೀಯಾ.. ಅದನ್ನ ವರ್ಷಗಟ್ಟಲೆಯಿಂದ ಖಾಲಿ ಏನಾದ್ರೂ ಬಿಟ್ಟಿದ್ದೀರಾ.. ಹಾಗಾದ್ರೆ ಇನ್ಮೇಲೆ ನಿಮಗೆ ಬಿಬಿಎಂಪಿ ಶಾಕ್ ನೀಡೋಕೆ ಮುಂದಾಗಿದೆ. ಹೌದು ನಗರಕ್ಕೆ ಚಿರತೆಗಳು ಎಂಟ್ರಿ ಕೊಟ್ಟು ಸಖತ್ ಕಾಟ ಕೊಡ್ತಿರೋ ಕಾರಣ ಖಾಲಿ ಸೈಟ್ ಮಾಲೀಕರ ಮೇಲೆ ಕಣ್ಣು ಇಟ್ಟಿರೋ ಮಹಾನಗರ ಪಾಲಿಕೆ ಸೈಟ್ ನಲ್ಲಿ ಗಿಡಿಗಂಟಿ ಬೆಳೆಸಿದ್ರೆ ಅಂತವರ ವಿರುದ್ದ ಸಮರ ಸಾರೋಕೆ ಮುಂದಾಗಿದೆ.
ಬೆಂಗಳೂರು ಸುತ್ತಮುತ್ತ ಕಾಡು ಇದ್ದ ಜಾಗದಲ್ಲಿ ಇವತ್ತು ದೊಡ್ಡ ದೊಡ್ಡ ಅಪಾರ್ಟಮೆಂಟ್,ಮನೆಗಳು ನಿರ್ಮಾಣಗೊಂಡಿವೆ.ಹೀಗಾಗಿ ಕಾಡಿನಲ್ಲಿದ್ದ ವನ್ಯಜೀವಿಗಳು ನಾಡಿನತ್ತ ಬರೋಕೆ ಶುರುವಾಗಿದೆ.ಕಳೆದ ಕೆಲ ತಿಂಗಳಿಂದ ಬೆಂಗಳೂರು ನಗರಕ್ಕೆ ಚಿರತೆ ಎಂಟ್ರಿಯಾಗಿ ನಗರದ ಗಿಡಗಂಟಿ ಪೋದೆಗಳಲ್ಲಿ ಅವಿತುಕೊಳ್ತಿವೆ. ಇದು ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಗೆ ಇನ್ನಿಲ್ಲದ ತಲೆನೋವು ತಂದಿದೆ. ಚಿರತೆಗಳು ಅವಿತುಕೊಳ್ಳುವದಕ್ಕೆ ನಗರದ ಸೈಟ್ ಮಾಲೀಕರ ನಿರ್ಲಕ್ಷ್ಯವೇ ಅನ್ನೋದು ಪಾಲಿಕೆಗೆ ಅರಿವಾಗಿ ಇದೀಗ ಖಾಲಿ ಸೈಟ್ ಬಿಟ್ಟ ಸೈಟ್ ಮಾಲೀಕರಿಗೆ ಗುನ್ನ ಇಡಲು ಪಾಲಿಕೆ ಚಿಂತಿಸಿದೆ.
ಹೌದು.. ಬೆಂಗಳೂರಿಗರಿಗೆ ಚಿರತೆ ಕೊಡ್ತಿರೋ ಕಾಟ ಅಷ್ಟಿಷ್ಟು ಅಲ್ಲವೇ ಅಲ್ಲ. ಒಂದು ಕಡೆ ಜನರಿಗೆ ತೊಂದ್ರೆ ಕೊಡುತ್ತಿದ್ರೆ ಮತ್ತೊಂದು ಕಡೆ ಸೈಟ್ ಮಾಲೀಕರಿಗೆ ಸಂಕಷ್ಟ ಕೊಡ್ತಿದೆ. ಆದ್ರೆ ಇದೀಗ ಬೆಂಗಳೂರು ಸೈಟ್ ಮಾಲೀಕರಿಗೂ ನಿದ್ದೆಗೆಡಿಸಿದೆ. ಕಳೆದ ಕೆಲ ದಿನಗಳ ಹಿಂದೆ ಹೊಸೂರು ರಸ್ತೆಯಲ ಖಾಲಿ ಜಾಗದಲ್ಲಿ ಚಿರತೆಯೊಂದು ಪತ್ತೆಯಾಗಿತ್ತು. ಸಿಟಿ ಮಂದಿಯ ನಿದ್ದೆಗೆಡಿಸಿತ್ತು. ಗಿಡಿಗಂಟಿ ಬೆಳೆದಿದ್ದ ಪೊದೆಯಲ್ಲಿ ಚಿರತೆ ಪತ್ತೆ ಕಾರ್ಯಾಚರಣೆ ಅರಣ್ಯ ಟೀಂಗೆ ಕಬ್ಬಿಣದ ಕಡಲೆಯಂತಾದಿತ್ತು. ಹೀಗಾಗಿ ಈ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಂಡ ಬಿಬಿಎಂಪಿ ಹೊಸ ರೂಲ್ಸ್ ಜಾರಿ ಮಾಡಿ, ಖಾಲಿ ಸೈಟ್ ಮಾಲೀಕರಿಗೆ ದಂಡದ ಬಿಸಿ ಮುಟ್ಟಿಸೋಕೆ ಮುಂದಾಗಿದೆ. ಖಾಲಿ ನಿವೇಶನದ ಸ್ಥಳಗಳು ಹಾವುಗಳ ವಾಸಸ್ಥಾನವಾಗಿದ್ದು, ನಾಗರಿಕರಿಗೆ, ವಿಶೇಷವಾಗಿ ಸುತ್ತಮುತ್ತ ಆಡುವ ಮಕ್ಕಳಿಗೆ ಅಪಾಯ ಉಂಟು ಮಾಡಲಿದೆ. ಹೀಗಾಗಿ ಇನ್ಮುಂದೆ ನಿಮ್ಮ ಸೈಟ್ ನಿರ್ವಹಣೆ ಮಾಡದೇ ಹಾಗೆ ಬಿಟ್ಟರೆ ದಂಡ ವಿಧಿಸಲು ಬಿಬಿಎಂಪಿ ಚಿಂತನೆ ನಡೆಸಿದೆ
ಸೈಟ್ ಮಾಲೀಕರು ತಮ್ಮ ಆಸ್ತಿ ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು BBMP 2018, 2019, 2020, 2022 ರಲ್ಲಿ ಆದೇಶ ಹೊರಡಿಸಿತ್ತು. ಆದ್ರೆ ಆಸ್ತಿ, ಮಾಲೀಕರ ಡೇಟಾ ಕೊರತೆಯಿಂದ ಈ ಆದೇಶ ಜಾರಿ ತರಲು ಪಾಲಿಕೆ ವಿಫಲವಾಗಿತ್ತು. ಹೀಗಾಗಿ ಇದೀಗ ಈ ಬಗ್ಗೆ ಮತ್ತೆ ಕಠಿಣ ಕಾನೂನುಗಳು ಜಾರಿಗೆ ಪಾಲಿಕೆ ಮುಂದಾಗಿದೆ. ಜೊತೆಗೆ ಈ ಸಂಬಂಧ ಪಾಲಿಕೆ ಈಗಾಗಲೇ ಒಂದು ಸುತ್ತಿನ ಸಭೆ ಕೂಡ ನಡೆಸಿದ್ದು, ಶೀಘ್ರದಲ್ಲೇ ಕಟ್ಟುನಿಟ್ಟಾದ ನಿಯಮಗಳೊಂದಿಗೆ ಆದೇಶ ಹೊರಡಿಸಲಿದೆ. ಚಿರತೆ ತಂದು ಆಪತ್ತು ಮತ್ತೆ ಮರುಕಳಿಸದಂದೇ ಎಚ್ಚೆತ್ತ ಬಿಬಿಎಂಪಿ ನಯಾ ರೂಲ್ಸ್ ಜಾರಿ ಮಾಡಿಲಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ