ಬೆಂಗಳೂರು ;- ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಲಹೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದೊಂದಿಗೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು, ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದೊಂದಿಗೆ ಹೊಂದಿಕೊಂಡು ಕೆಲಸ ಮಾಡಬೇಕು ಎಂದರು.
ರಾಜ್ಯದಲ್ಲಿ ಬರಗಾಲ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಹುಟ್ಟುಹಬ್ಬದ ಅವಶ್ಯಕತೆಯಿಲ್ಲ ಎಂದಿದ್ದೆ. ಆದರೂ ಅಭಿಮಾನಿಗಳು ಬಂದು ಶುಭ ಕೋರುತ್ತಿದ್ದಾರೆ. ಅವರಿಗೆ ಋಣಿ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಬರ ಅಧ್ಯಯನ ಪ್ರವಾಸ ಮಾಡಲಿದ್ದಾರೆ. ಏಳು ಮತ್ತು ಎಂಟರಂದು ಜಿಲ್ಲಾ ಪ್ರವಾಸಕ್ಕೆ ಹೋಗಲಿದ್ದಾರೆ” ಎಂದರು.
ಬರ ಪ್ರವಾಸದ ಅಧ್ಯಯನಕ್ಕೆ ಹೋಗುವ ಬದಲು ಕೇಂದ್ರದಿಂದ ಅನುದಾನ ತನ್ನಿ ಎನ್ನುವ ಕಾಂಗ್ರೆಸ್ ನಾಯಕರ ಆರೋಪಕ್ಕೆ ಕಿಡಿಕಾರಿದ ವಿಜಯೇಂದ್ರ, “ಅವರು ಉದ್ಧಟತನದ ಮಾತುಗಳನ್ನಾಡುತ್ತಿದ್ದಾರೆ, ಸರ್ಕಾರದ ಗೌರವಾನ್ವಿತ ಸ್ಥಾನದಲ್ಲಿದ್ದು ಅವರ ಹೇಳಿಕೆ ರಾಜ್ಯಕ್ಕೆ ಮಾರಕವಾಗಲಿದೆ. ಆಡಳಿತದಲ್ಲಿದ್ದು ರಾಜ್ಯದ ಜನರನ್ನು ಪ್ರತಿನಿಧಿಸಬೇಕಾದವರು ಕೇಂದ್ರದ ಜೊತೆ ಉತ್ತಮ ಸಂಬಂಧ ಇರಿಸಿಕೊಂಡು ಕೆಲಸ ಮಾಡಬೇಕು, ಚುನಾವಣೆ ವೇಳೆ ರಾಜಕಾರಣ ಮಾಡಬೇಕು ಇತರೆ ಸಮಯದಲ್ಲಿ ರಾಜ್ಯದ ಹಿತದೃಷ್ಟಿಯಿಂದ ಕೇಂದ್ರದ ಜೊತೆ ಹೊಂದಿಕೊಂಡು ಕೆಲಸ ಮಾಡಬೇಕು, ನಿಮಗೆ ಹೋಗಲಾಗದಿದ್ದರೆ ಪ್ರಧಾನಿಗಳ ಬಳಿ ನಿಮ್ಮ ಅಧಿಕಾರಿಗಳನ್ನಾದರೂ ಕಳಿಸಿ, ಕೇಂದ್ರದ ಜೊತೆ ಸರಿಯಾದ ಸ್ಪಂದನೆ ಸಿಗಬೇಕು, ಇನ್ನು ಮೇಲಾದರೂ ಅದನ್ನು ಮಾಡಲಿದ್ದಾರಾ ನೋಡಬೇಕು?” ಎಂದರು.