ಕೆಲವರು ಮೈ ತುಂಬಾ ಬೆವರುತ್ತದೆ, ಮತ್ತೆ ಕೆಲವರದ್ದು ಅಷ್ಟು ಬೆವರುವುದಿಲ್ಲ, ಇನ್ನು ಕೆಲವರಿಗೆ ಮೈಯೇನೂ ಅಷ್ಟು ಬೆವರುವುದಿಲ್ಲ, ಆದರೆ ಪಾದಗಳು ತುಂಬಾ ಬೆವರುತ್ತಿರುತ್ತದೆ. ಅಂಥವರಿಗೆ ಪಾದಗಳ ದುರ್ವಾಸನೆ ತಪ್ಪಿದ್ದಲ್ಲ. ಈ ಪಾದಗಳ ದುರ್ವಾಸನೆ ಬೀರಲಾರಂಭಿಸಿದರೆ ನಮ್ಮ ಪಕ್ಕ ಕೂರಲು ಸ್ನೇಹಿತರು ಹಿಂಜರಿಯುತ್ತಾರೆ, ಇನ್ನು ಶೂ ಬಿಚ್ಚುವಾಗ ಬರುವ ದುರ್ವಾಸನೆಗೆ ಅಕ್ಕ-ಪಕ್ಕದವರು ಮೂಗು ಮುಚ್ಚಿಕೊಳ್ಳುತ್ತಾರೆ, ಇದರಿಂದ ಮುಜುಗರ ತಪ್ಪಿದ್ದಲ್ಲ.
ಬ್ಲ್ಯಾಕ್ ಟೀ
ಎಲ್ಲರ ಮನೆಯಲ್ಲಿ ಟೀ ಪುಡಿ ಇದ್ದೇ ಇರುತ್ತದೆ. ಬರೀ ನೀರಿಗೆ 1 ಚಮಚ ಟೀ ಪುಡಿ ಹಾಕಿ ಡಿಕಾಷನ್ ತಯಾರಿಸಿ. ನಂತರ ಆ ಡಿಕಾಷನ್ ಅನ್ನು ಅರ್ಧ ಬಕೆಟ್ ಉಗುರು ಬೆಚ್ಚಗಿನನೀರಿಗೆ ಸುರಿದು ಅದರಲ್ಲಿ 10 ನಿಮಿಷ ಪಾದಗಳನ್ನುಇಟ್ಟು ಪೇಪರ್ ಓದುತ್ತಾ ಅಥವಾ ನಿಮ್ಮಿಷ್ಟ ಸಂಗೀತ ಕೇಳುತ್ತಾ ಆರಾಮವಾಗಿ ಇರಿ. ನಂತರ ಕಾಲುಗಳನ್ನು ತೊಳೆದು ಒಣಗಿದ ಟವಲ್ನಿಂದ ಒರೆಸಿ. ಈ ರೀತಿ ಮಾಡುತ್ತಾ ಬಂದರೆ ಕೆಲವೇ ತಿಂಗಳಿನಲ್ಲಿ ಪಾದ ದುರ್ವಾಸನೆ ಬೀರುವ ಸಮಸ್ಯೆ ಇಲ್ಲವಾಗುವುದು. ಈ ರೀತಿ ಒಂದು ದಿನ ಮಾಡಿ ಮತ್ತೆ ಮಾಡದೆ ಇರಬೇಡಿ, ಪಾದಗಳ ದುರ್ವಾಸನೆ ಸಮಸ್ಯೆ ಇಲ್ಲವಾಗುಷ್ಟು ಸಮಯ ಮಾಡಿ.
ಲ್ಯಾವೆಂಡರ್ ಎಣ್ಣೆ
ಇನ್ನು ಟೀ ಬ್ಯಾಗ್ನಲ್ಲಿ 10 ನಿಮಿಷ ಕಾಲಿಟ್ಟು ಕೂರಲು ಸಮಯವಿಲ್ಲವೆಂದು ಬಯಸುವವರು ಲ್ಯಾವೆಂಡರ್ ಎಣ್ಣೆ ಬಳಸಬಹುದು. ಈ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಪಾದಗಳಿಗೆ ಹಚ್ಚಿ ಮಸಾಜ್ ಮಾಡಿ, ಈ ಎಣ್ಣೆ ಪಾದಗಳು ದುರ್ವಾಸನೆ ಬೀರುವ ಬ್ಯಾಕ್ಟೀರಿಯಾಗಳನ್ನು ಕೊಂದು ಹಾಕುತ್ತದೆ. ಇನ್ನು ಈ ಎಣ್ಣೆ ಮಸಾಜ್ ಮಾಡುವುದರಿಂದ ಕಣ್ಣಿಗೆ ನಿದ್ದೆಯೂ ಚೆನ್ನಾಗಿ ಹತ್ತುವುದು.
ವಿನೆಗರ್
ವಿನೆಗರ್ ಅನ್ನುಅನೇಕ ರೀತಿಯಲ್ಲಿ ಸೌಂದರ್ಯವರ್ಧಕವಾಗಿ ಬಳಸಬಹುದು. ಮೊಡವೆ ಸಮಸ್ಯೆ, ತಲೆ ಹೊಟ್ಟಿನ ಸಮಸ್ಯೆ, ಕೂದಲು ಆಕರ್ಷಕವಾಗಿ ಕಾಣಲು ಹೀಗೆ ನಾನಾ ಸೌಂದರ್ಯ ಸಮಸ್ಯೆ ನೀಗಿಸಲು ವಿನೆಗರ್ ಬಳಸಬಹುದು. ಈ ವಿನೆಗರ್ ಬಳಸಿ, ಕಂಕುಳ ಹಾಗೂ ಪಾದಗಳು ದುರ್ವಾಸನೆ ಬೀಉವುದನ್ನು ತಡೆಯಬಹುದು. ಪಾದಗಳು ದುರ್ವಾಸನೆ ಬೀರುವುದನ್ನು ತಡೆಯಲು ವಾರದಲ್ಲಿ ಎರಡು ಬಾರಿ ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರಿಗೆ ಅರ್ಧ ಕಪ್ ವಿನೆಗರ್ ಹಾಕಿ ಅದರಲ್ಲಿ ಪಾದಗಳನ್ನು 15 ನಿಮಿಷ ಇಡಿ. ಇದನ್ನು ಬೆಳಗ್ಗೆ ಅಥವಾ ಸಂಜೆ ನಿಮಗೆ ಸಮಯ ಸಿಕ್ಕಾಗ ಮಾಡಿ, ಈ ರೀತಿ ಮಾಡುತ್ತಾ ಬರುವುದರಿಂದ ಪಾದಗಳ ದುರ್ವಾಸನೆ ಕಡಿಮೆಯಾಗುವುದು.
ಜೋಳದ ಹಿಟ್ಟು
ಕೆಲವೊಂದು ಶೂಗಳನ್ನು ಆಗಾಗ ತೊಳೆಯಲು ಸಾಧ್ಯವಾಗುವಿದಿಲ್ಲ, ಅಂಥ ಶೂಗಳನ್ನು ಪಾದ ದುರ್ಬವಾಸನೆ ಬೀರುವ ಸಮಸ್ಯೆ ಇರುವವರು ಈ ರೀತಿಯ ಶೂ ಹಾಕುವುದೇ ಕಷ್ಟವಾಗುತ್ತದೆ. ಅಂಥವರು ಶೂ ಒಳಗಡೆ ಸ್ವಲ್ಪ ಸ್ವಲ್ಪ ಜೋಳದ ಹಿಟ್ಟನ್ನು, ಅಡುಗೆ ಸೋಡಾದ ಜತೆ ಮಿಶ್ರ ಮಾಡಿ ಉದುರಿಸಿ ಬಿಸಿಲಿನಲ್ಲಿ ಒಣಗಿಸಿ ನಂತರ ಧರಿಸಿ, ಹೀಗೆ ಮಾಡುವುದರಿಂದ ಶೂ ದುರ್ವಾಸನೆ ಬೀರುವುದನ್ನು ತಡೆಗಟ್ಟಬಹುದು.
ಪುದೀನಾ ಸ್ಕ್ರಬ್
ಪಾದಗಳ ದುರ್ವಾಸನೆ ತಡೆಗಟ್ಟುವಲ್ಲಿ ಪುದೀನಾ ಕೂಡ ಸಹಕಾರಿ. ದಿನಾ ಪಾದಕ್ಕೆ ಪುದೀನಾ ಸ್ಕ್ರಬ್ ಮಾಡಿದರೆ ಸಾಕು ಪಾದಗಳು ದುರ್ವಾಸನೆ ಬೀರುವುದಿಲ್ಲ. ಪುದೀನಾ ಎಲೆಯನ್ನು ಒಣಗಿಸಿ ಪುಡಿ ಮಾಡಿ, ಅದಕ್ಕೆ ಸಕ್ಕರೆ ಮಿಶ್ರ ಮಾಡಿ ಸ್ಕ್ರಬ್ ಮಾಡಿ, ಇದರಿಂದ ಪಾದಗಳನ್ನು ಎಕ್ಸ್ಫೋಲೆಟ್ ಮಾಡಿದಂತಾಗುವುದು, ದುರ್ವಾಸನೆ ಬೀರುವ ಬ್ಯಾಕ್ಟಿರಿಯಾ ನಾಶವಾಗುವುದು.
ಎಪ್ಸೋಮ್ ಸಾಲ್ಟ್
ಎಪ್ಸೋಮ್ ಸಾಲ್ಟ್ ಅನ್ನು ಸೌಂದರ್ಯವರ್ಧಕವಾಗಿ ಬಳಸಬಹುದು. ಇದನ್ನು ಸ್ಕ್ರಬ್ಬರ್ ಆಗಿ ಬಳಸಲಾಗುವುದು. ಪಾದಗಳ ದುರ್ವಾಸನೆ ಹೋಗಲಾಡಿಸಲು 2 ಕಪ್ ಎಪ್ಸೋಮ್ ಸಾಲ್ಟ್ ಅನ್ನು ಅರ್ಧ ಬಕೆಟ್ ಉಗುರು ಬೆಚ್ಚಗಿನ ನೀರಿಗೆ ಹಾಕಿ ಅದರಲ್ಲಿ ಪಾದಗಳನ್ನು 15 ನಿಮಿಷ ಇಡಿ. ಈ ವಿಧಾನ ಕೂಡ ಪಾದದ ದುರ್ವಾಸನೆ ತಡೆಯುವಲ್ಲಿ ಸಹಕಾರಿ.
ಅಕ್ಕಿ ತೊಳೆದ ನೀರು
ಇನ್ನು ಅಕ್ಕಿ ತೊಳೆದ ನೀರನ್ನು ಬಿಸಾಡಬೇಡಿ. ಅದನ್ನು ಬಳಸಿ ಪಾದ ದುರ್ವಾಸನೆ ಬೀರುವುದನ್ನು ತಡೆಗಟ್ಟಿ. ಅಕ್ಕಿ ತೋಳೆದ ನೀರಿನಲ್ಲಿ ಕಾಲುಗಳನ್ನು 10 ನಿಮಿಷ ಇಡಿ. ಈ ರೀತಿ ಮಾಡುತ್ತಾ ಬಂದರೆ ಪಾದಗಳ ದುರ್ವಾಸನೆ ಬೀರುವ ಸಮಸ್ಯೆ ದೂರವಾಗುವುದು.
ಮೌತ್ ವಾಶ್
ಮೌತ್ ವಾಶ್ನಿಂದ ಬಾಯಿ ದುರ್ವಾಸನೆ ಮಾತ್ರವಲ್ಲ ಕಾಲುಗಳು ದುರ್ವಾಸನೆ ಬೀರುವುದನ್ನೂ ತಡೆಯಬಹುದು. ಅರ್ಧ ಬಕೆಟ್ ಹದ ಬಿಸಿ ನೀರಿಗೆ ಒಂದು ಚಮಚ ಮೌತ್ವಾಶ್ ಹಾಕಿ ಅದರಲ್ಲಿ ಹಾಲುಗಳನ್ನು ಒಂದು 10 ನಿಮಿಷ ಇಟ್ಟು, ನಂತರ ಪಾದಗಳನ್ನು ತೊಳೆದು ಒರೆಸಿ. ಈ ರೀತಿ ಮಾಡುವುದರಿಂದ ಪಾದಗಳು ದುರ್ವಾಸನೆ ಬೀರುವುದನ್ನು ತಡೆಯಬಹುದು.