ಇಸ್ಲಾಮಾಬಾದ್: ಪಂಜಾಬ್ ಪ್ರಾಂತ್ಯದ ಪಾಕಿಸ್ತಾನದ ವಾಯುಪಡೆ ತರಬೇತಿ (Pakistan Air Force Base) ನೆಲೆಯ ಮೇಲೆ ದಾಳಿ ನಡೆಸಿದ್ದ 9 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಪಾಕಿಸ್ತಾನ ಸೇನೆ ತಿಳಿಸಿದೆ. ಮುಂಜಾನೆ ಒಂಬತ್ತು ಶಸ್ತ್ರಸಜ್ಜಿತ ಭಯೋತ್ಪಾದಕರು ದಾಳಿ ನಡೆಸಿದ್ದರು. ಅವರೆಲ್ಲರನ್ನೂ ನರಕಕ್ಕೆ ಕಳುಹಿಸಲಾಗಿದೆ ಎಂದು ಪಾಕ್ ಸೇನೆ ಹೇಳಿದೆ.
ದೇಶದಲ್ಲಿ ಮೂರು ಪ್ರತ್ಯೇಕ ಭಯೋತ್ಪಾದಕ ದಾಳಿಗಳಲ್ಲಿ 17 ಸೈನಿಕರು ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ವಾಯುಪಡೆಯ ಮಿಯಾನ್ವಾಲಿ ತರಬೇತಿ ವಾಯುನೆಲೆಯ ಮೇಲೆ ಒಂಬತ್ತು ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿಯ ಸಮಯದಲ್ಲಿ ಕಾರ್ಯನಿರ್ವಹಿಸದ ಮೂರು ವಿಮಾನಗಳಿಗೆ ಹಾನಿಯಾಗಿತ್ತು.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಪಿಎಎಫ್ ತರಬೇತಿ ಏರ್ಬೇಸ್ ಮಿಯಾನ್ವಾಲಿಯಲ್ಲಿ ಕೂಂಬಿಂಗ್ ಮತ್ತು ಕ್ಲಿಯರೆನ್ಸ್ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗಿದೆ. ಎಲ್ಲಾ ಒಂಬತ್ತು ಭಯೋತ್ಪಾದಕರನ್ನು ನರಕಕ್ಕೆ ಕಳುಹಿಸಲಾಗಿದೆ ಎಂದು ಮಿಲಿಟರಿ ದೃಢಪಡಿಸಿದೆ. ತೆಹ್ರೀಕ್-ಇ-ಜಿಹಾದ್ ಪಾಕಿಸ್ತಾನ್ (ಟಿಜೆಪಿ).
ಇದು ಹೊಸದಾಗಿ ರೂಪುಗೊಂಡಿರುವ ಭಯೋತ್ಪಾದಕ ಗುಂಪು. ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನದ (ಟಿಟಿಪಿ) ಅಂಗಸಂಸ್ಥೆಯಾಗಿದ್ದು, ದಾಳಿಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದೆ. ದಾಳಿಯನ್ನು ಖಂಡಿಸಿದ ಹಂಗಾಮಿ ಪ್ರಧಾನಿ ಅನ್ವಾರುಲ್ ಹಕ್ ಕಾಕರ್, ನಮ್ಮ ಭದ್ರತಾ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಯಾವುದೇ ಪ್ರಯತ್ನಕ್ಕೆ ಅಚಲ ಪ್ರತಿರೋಧವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.