ಜಮಖಂಡಿ : ನಾಯಕತ್ವ ಬದಲಾವಣೆ, ಸಂಪುಟ ಪುನರಚನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಐದು ವರ್ಷ ನಮ್ಮದೇ ಸರ್ಕಾರ, ನಾನೇ ಸಿಎಂ ಎಂದು ಹೇಳಿರುವುದು ಸತ್ಯವಾಗಿದೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ತಾಲ್ಲೂಕಿನ ಕಂಕಣವಾಡಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ನಿರ್ಮಿಸಿರುವ ಶ್ರೀ ಸಿದ್ದೇಶ್ವರ ತೂಗು ಸೇತುವೆ ಉದ್ಘಾಟನೆ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಅವರನ್ನು ಬದಲಿಸುವ ಚರ್ಚೆ ಇಲ್ಲ. ಅವರು ಹೇಳಿರುವದು ಸರಿಯಾಗಿದೆ. ಒಂದು ವೇಳೆ ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡಬೇಕೆಂದರೆ ಅದನ್ನು ಶಾಸಕಾಂಗ ಪಕ್ಷದಲ್ಲಿ ಮಾಡಬೇಕಾಗುತ್ತದೆ.
ಔಷಧಿಗಳಿಲ್ಲದೆ ಆರೋಗ್ಯ ಚಿಕಿತ್ಸೆ: ಸುಪ್ರೀಂ ರೇ ಹೀಲಿಂಗ್ ಸೆಂಟರ್ : ಇಲ್ಲಿದೆ ಉಚಿತ ಸಲಹೆ – Reiki
ಅದನ್ನು ಹೈಕಮಾಂಡ್ ನೋಡಿಕೊಳ್ಳುತ್ತದೆ. ಈ ಕುರಿತು ಯಾರಿಗೂ ಅಸಮಾಧಾನ ಇಲ್ಲ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಆನಂದ ನ್ಯಾಮಗೌಡ, ಅರುಣಕುಮಾರ ಶಹಾ, ಈಶ್ವರ ಕರಬಸನವರ, ಮುತ್ತಣ್ಣ ಹಿಪ್ಪರಗಿ, ಪರಗೌಡ ಬಿರಾದಾರ, ಅಶೋಕ ಕಿವಡಿ, ಅಬೂಬಕರ ಕುಡಚಿ, ಇತರರು ಇದ್ದರು.