ಬೆಂಗಳೂರು: ಸದ್ಯ ಟೀಂ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ (Virat Kohli), ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಶತಕ ದಾಖಲೆ ಸರಿಗಟ್ಟುತ್ತಾರೆ ಎಂಬುದು ಚರ್ಚೆಯಲ್ಲಿರುವ ವಿಷಯ. ಆದ್ರೆ ಕೊಹ್ಲಿಗೂ ಮುನ್ನವೇ ನ್ಯೂಜಿಲೆಂಡ್ ಕ್ರಿಕೆಟಿಗ ರಚಿನ್ ರವೀಂದ್ರ (Rachin Ravindra) ತಾನು ಪ್ರವೇಶಿಸಿದ ಚೊಚ್ಚಲ ವಿಶ್ವಕಪ್ ಆವೃತ್ತಿಯಲ್ಲೇ ಸಚಿನ್ ತೆಂಡೂಲ್ಕರ್ ಅವರ ಶತಕ ದಾಖಲೆಯೊಂದನ್ನ ಮುರಿದಿದ್ದಾರೆ.
4 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಏಕದಿನ ವಿಶ್ವಕಪ್ ಇತಿಹಾಸದಲ್ಲಿ 2 ಶತಕಗಳನ್ನು ಗಳಿಸಿದವರಲ್ಲಿ ಸಚಿನ್ ತೆಂಡೂಲ್ಕರ್ ಮೊದಲಿಗರಾಗಿದ್ದರು. ಸಚಿನ್ 23 ವರ್ಷದವರಾಗಿದ್ದಾಗ 1996ರ ವಿಶ್ವಕಪ್ನಲ್ಲಿ (World Cup) 2 ಶತಕ ಸಿಡಿಸಿದ್ದರು. ಇದೀಗ 23 ವರ್ಷ ವಯಸ್ಸಿನ ರಚಿನ್ ರವೀಂದ್ರ 2023ರ ವಿಶ್ವಕಪ್ ಟೂರ್ನಿಯಲ್ಲಿ 3 ಶತಕ ಸಿಡಿಸಿ ಸಚಿನ್ ದಾಖಲೆ ಮುರಿದಿದ್ದಾರೆ
ಕೊಹ್ಲಿಯನ್ನೂ ಹಿಂದಿಕ್ಕಿದ ರಚಿನ್: ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ 7 ಪಂದ್ಯಗಳಲ್ಲಿ ಬರೋಬ್ಬರಿ 4 ಶತಕ ಸಿಡಿಸಿರುವ ದಕ್ಷಿಣ ಆಫ್ರಿಕಾ ಆಟಗಾರ ಕ್ವಿಂಟನ್ ಡಿಕಾಕ್ 545 ರನ್ ಸಿಡಿಸಿ ವಿಶ್ವಕಪ್ ಟೂರ್ನಿಯ ಟಾಪ್ ಸ್ಕೋರರ್ಗಳಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಆದ್ರೆ ಕೊಹ್ಲಿಯನ್ನು ಹಿಂದಿಕ್ಕಿದ ರವೀಂದ್ರ 8 ಪಂದ್ಯಗಳಲ್ಲಿ 3 ಶತಕ ಸಿಡಿಸಿರುವ 523 ರನ್ಗಳೊಂದಿಗೆ 2ನೇ ಸ್ಥಾನಕ್ಕೆ ಜಿಗಿದಿದ್ದಾರೆ. 442 ರನ್ ಬಾರಿಸಿರುವ ಕೊಹ್ಲಿ 3ನೇ ಸ್ಥಾನ, 428 ರನ್ ಗಳಿಸಿರುವ ಡೇವಿಡ್ ವಾರ್ನರ್ 4ನೇ ಸ್ಥಾನದಲ್ಲಿದ್ದರೆ, 402 ರನ್ ಬಾರಿಸಿರುವ ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ.