ಕೋಳಿ ಸಾಕಾಣಿಕೆ ಮಾಡಬೇಕು ಎನ್ನುವ ಪ್ರತಿಯೊಬ್ಬರಿಗೂ ಉಪಯುಕ್ತವಾಗುವ ಸೂಕ್ತ ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
ಕೆಳಗೆ ತಿಳಿಸಿದಂತೆ ನಿರ್ವಹಣೆಯನ್ನು ಮಾಡಿದರೆ ರೋಗಗಳನ್ನು ತಡೆಗಟ್ಟಲು ಸಾಧ್ಯವಾಗುತ್ತದೆ.
- ಶುದ್ಧ ಪಾತ್ರೆಯಲ್ಲಿ ಯಾವಾಗಲೂ ಕೋಳಿಗಳಿಗೆ ಶುದ್ಧ ನೀರನ್ನು ಒದಗಿಸಬೇಕು.
- ಕೋಳಿ ಆಹಾರವನ್ನು ಒಣಗಿದ ಹಾಗೂ ಸ್ವಚ್ಛ ಸ್ಥಳದಲ್ಲಿ ಇಡಬೇಕು.
- ಮೇವಿಣಿಕೆಗಳನ್ನು ಮತ್ತು ನೀರುಣಿಕೆಗಳನ್ನು ಪ್ರತಿದಿನ ಶುದ್ಧ ನೀರಿನಿಂದ ತೊಳೆದು ಒಣಗಿಸಿದ ನಂತರ ಆಹಾರವನ್ನು ನೀಡಬೇಕು.
- ಕೋಳಿ ಮನೆಯನ್ನು ಪ್ರತಿದಿನ ಸ್ವಚ್ಛವಾಗಿ ಇಡಬೇಕು.
- ನೆಲ ಮತ್ತು ಗೋಡೆಯ ಸುತ್ತಮುತ್ತ ಸುಣ್ಣವನ್ನು ಹಾಕಬೇಕು.
- ಯಾವ ಕೋಳಿಗಳು ರೋಗಕ್ಕೆ ತುತ್ತಾಗುವ ಸಾಧ್ಯತೆ ಇದೆ ಅಂತಹ ಕೋಳಿಗಳನ್ನು ಬೇರ್ಪಡಿಸಬೇಕು.
- ಕೋಳಿಗಳ ಜೊತೆಯಲ್ಲಿ ಬೇರೆ ಪ್ರಾಣಿಗಳನ್ನು ಸಾಕಬಾರದು.
- ಜಂತುನಾಶಕ ಔಷಧಿಯನ್ನು ಲಸಿಕೆ ಹಾಕುವ 12 ರಿಂದ15 ದಿನಗಳ ಮುಂಚೆ ನೀಡಬೇಕು.
- ಲಸಿಕೆಯನ್ನು ವೇಳಾ ಪಟ್ಟಿಯಂತೆ ಹಾಕಿಸಬೇಕು.
- ಕೋಳಿಗಳಲ್ಲಿ ಪ್ರಮುಖವಾಗಿ ಕಂಡು ಬರುವ ರೋಗಗಳು ಮತ್ತು ಅವುಗಳ ನಿರ್ವಹಣೆ
ಗಾಯಗಳ ಮೂಲಕ ಹರಡುತ್ತದೆ, ಸೊಳ್ಳೆಗಳು ವಾಹಕಗಳಾಗಿರುತ್ತವೆ. ಚರ್ಮ, ಬಾಯಿ ಮತ್ತು ತಲೆಯ ಮೇಲೆ ಗುಳ್ಳೆಗಳು ಸೋಫ್ರಾಮೈಸಿನ್ ಅಥವಾ ಟರ್ರಾಮೈಸಿನ ನಂಜುನಿರೋಧಕ ಮುಲಾಮ ಉಪಯೊಗದಿಂದ, 7-8 ನೇ ವಾರಕ್ಕೆ (0.5 ಮಿ.ಲಿ. ಚರ್ಮದ ಕೆಳಗೆ