ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮಂದಿ ಅಪರಿಚಿತ ಸಂಖ್ಯೆಗಳಿಂದ ಬರುವ ವಾಟ್ಸಾಪ್ ಕರೆಗಳಿಂದ ನೊಂದು ಹೋಗಿದ್ದಾರೆ. ನಿಮಗೆ ಕೂಡಾ ಇಂತಹ ಅನುಭವವಾಗಿದೆಯೇ…? ನೀವೂ ಇಂತಹ ಕರೆಗಳಿಂದ ಬೇಸತ್ತು ಹೋಗಿದ್ದೀರಾ ಇಲ್ಲಿದೆ ಸರಳ ಉಪಾಯ!
ಅಪರಿಚಿತ ಕರೆಗಳನ್ನು ಮ್ಯೂಟ್ ಮಾಡುವುದು ಹೇಗೆ…?
- ಆಂಡ್ರಾಯ್ಡ್, ಐಫೋನ್ ಅಥವಾ ಇತರ ಪ್ಲಾಟ್ಫಾರ್ಮ್ಗಳಲ್ಲಿ ವಾಟ್ಸಾಪ್ ಅಪ್ಲಿಕೇಷನ್ ತೆರೆಯಿರಿ
- `ಸೆಟ್ಟಿಂಗ್ಸ್’ ಮೆನುವಿಗೆ ಹೋಗಿ. ಆಂಡ್ರಾಯ್ಡ್ನಲ್ಲಿ ಸೆಟ್ಟಿಂಗ್ ಮೆನುವಿಗಾಗಿ ಮೇಲಿನ ಬಲಭಾಗದಲ್ಲಿರುವ ಮೂರು ಚುಕ್ಕೆಗಳ ಮೆನು ಐಕಾನ್ ಅನ್ನು ಟ್ಯಾಪ್ ಮಾಡಿ. ಐಓಎಸ್ನಲ್ಲಿ, ನೀವು ಕೆಳಗಿನ ಎಡಮೂಲೆಯಲ್ಲಿರುವ ಸೆಟ್ಟಿಂಗ್ಸ್ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ.
- ಪ್ರೈವೆಸಿ ಅಂದರೆ ಗೌಪ್ಯತೆ ಆಯ್ಕೆಯನ್ನು ಟ್ಯಾಪ್ ಮಾಡಿ
- `ಕರೆಗಳು’ (Calls) ಇದನ್ನು ಟ್ಯಾಪ್ ಮಾಡಿ ಮತ್ತು ನಂತರ `ಸೈಲೆಂಟ್ ಅನ್ನ್ನೋನ್ ಕಾಲರ್ಸ್’ ಎಂಬ ಆಯ್ಕೆಯನ್ನು ಟ್ಯಾಪ್ ಮಾಡಿ