ನೆಲಮಂಗಲ:- ಮೋದಿ ಜೊತೆಗಿನ ಫೋಟೋ ಬಳಸಿ ವೈದ್ಯೆಗೆ 95 ಸಾವಿರ ರೂ. ವಂಚಿಸಿದ ನಕಲಿ ಆರ್ಮಿ ಆಫೀಸರ್ ವಿರುದ್ಧ FIR ದಾಖಲಾಗಿದೆ.
ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಕಲಿ ಆರ್ಮಿ ಆಫೀಸರ್ ಸತೀಶ್ ಎಂಬಾತ ಸೇನೆಯಲ್ಲಿ 25 ಮಂದಿ ಮಹಿಳೆಯರನ್ನು ತಪಾಸಣೆಗೆ ಕಳುಹಿಸುವುದಾಗಿ ಹೇಳಿ ದಾಸರಹಳ್ಳಿಯ ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞೆ ಡಾ.ಜ್ಯೋತಿ ಅವರನ್ನು ನಂಬಿಸಿದ್ದಾನೆ. ಅಲ್ಲದೆ, ಆರ್ಮಿಯಿಂದ ಅಡ್ವಾನ್ಸ್ ಪೇ ಮಾಡಿಸುತ್ತಾರೆ. ನಿಮ್ಮ ಯುಪಿಐ ಸ್ಕ್ಯಾನರ್ ಕಳುಹಿಸಿ ಎಂದು ಕೇಳಿದ್ದಾನೆ.
ಡಾಕ್ಟರ್ ಯುಪಿಐ ಸ್ಕ್ಯಾನರ್ ಕಳುಹಿಸುತ್ತಲೇ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ 95 ಸಾವಿರ ರೂಪಾಯಿ ಬೇರೊಂದು ಖಾತೆಗೆ ವರ್ಗಾವಣೆಯಾಗಿದೆ. ಆನ್ಲೈನ್ ಮೂಲಕ ಹಣ ಎಗರಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ಡಾಕ್ಟರ್ ಜ್ಯೋತಿ ಅವರು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.