ಮೈಸೂರು: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ರಸ್ತೆಗೆ (Bengaluru Mysuru Expressway) ಸಿದ್ದರಾಮಯ್ಯ ಇಷ್ಟು ಅನುದಾನ ಕೊಟ್ಟಿದ್ದೀನಿ ಅಂತ ಹೇಳಿಬಿಡಲಿ, ಅವರ ಹೆಸರನ್ನೇ ರಸ್ತೆಗೆ ಇಡೋಣ. ಬೇಕಿದ್ದರೆ ಸಿದ್ದರಾಮಯ್ಯ-ಮಹದೇವಪ್ಪ ಜೋಡಿ ರಸ್ತೆ ಅಂತಾನೇ ನಾಮಕರಣ ಮಾಡೋಣ ಎಂದು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.
ಮೈಸೂರಿನಲ್ಲಿ (Mysuru) ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಎಕ್ಸ್ಪ್ರೆಸ್ವೇ ನಿರ್ಮಾಣ ಯೋಜನೆಗೆ 8,500 ಕೋಟಿ ರೂ. ಖರ್ಚಾಗಿದೆ. ಅದರಲ್ಲಿ ಸಿದ್ದರಾಮಯ್ಯ (Siddaramaiah) ಮತ್ತು ಮಹದೇವಪ್ಪ (HC Mahadevappa) ಅವರು ಎಂಟುವರೆ ರೂಪಾಯಿಯನ್ನೂ ಕೊಟ್ಟಿಲ್ಲ. ಅವರು ಇಷ್ಟು ಕೊಟ್ಟಿದ್ದೀನಿ ಅಂತ ಹೇಳಿದ್ರೆ ರಸ್ತೆಗೆ ಅವರ ಹೆಸರನ್ನೇ ಇಡೋಣ ಎಂದು ಕುಟುಕಿದ್ದಾರೆ. ಎಕ್ಸ್ಪ್ರೆಸ್ವೇ ಹೆದ್ದಾರಿ ಆರಂಭವಾಗುವುದಕ್ಕೂ ಮುಂಚಿನಿಂದಲೂ ಕ್ರೆಡಿಟ್ ವಾರ್ ನಡೆಯುತ್ತಿದೆ. ಈ ವಿಚಾರದಲ್ಲಿ ಇತ್ತೀಚೆಗಷ್ಟೇ ಸಿಎಂ ವಿರುದ್ಧ ಸಿಂಹ ವಾಗ್ದಾಳಿ ನಡೆಸಿದ್ದರು.
ಲಾಕ್ ಆಗುತ್ತಾ ರಾಜಧಾನಿ ಬೆಂಗಳೂರು – ಕನ್ನಡ ಸಂಘಟನೆಗಳು ಕೊಟ್ಟ ಎಚ್ಚರಿಕೆ ಏನು!?
ಯಾರು ಬುರುಡೆ ಬಿಡುತ್ತಿದ್ದಾರೆ, ಖಾಲಿ ಡಬ್ಬ ಅಲ್ಲಾಡಿಸುತ್ತಿದ್ದಾರೆ ಎಂಬುದು ಆ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಗೊತ್ತು. ರಸ್ತೆಯಲ್ಲಿ ನೀರು ತುಂಬಿದ್ದಾಗ, ಅಂಡರ್ ಪಾಸ್ನಲ್ಲಿ ನೀರು ತುಂಬಿದಾಗ ಬೈಯ್ದಿದ್ದು ಯಾರನ್ನಾ? ಆ ಸಮಸ್ಯೆ ಪರಿಹರಿಸಿದ್ದು ಯಾರು? ರಸ್ತೆಯಲ್ಲಿ ಅಪಘಾತ ಹೆಚ್ಚಾದಾಗ ಬೈಯ್ದಿದ್ದು ಯಾರನ್ನ? ಆ ಸಮಸ್ಯೆ ಬಗೆಹರಿಸಿದ್ದು ಯಾರು? ಬೈಯ್ದಿದ್ದು ಪ್ರತಾಪ್ ಸಿಂಹನನ್ನೇ ಸಮಸ್ಯೆ ಪರಿಹರಿಸಿದ್ದೂ ಪ್ರತಾಪ್ ಸಿಂಹನೇ ಎಂದು ತಿರುಗೇಟು ನೀಡಿದ್ದರು.