ಬೆಂಗಳೂರು:- ಮೆಡಿಕಲ್ ಸೀಟು ಹಂಚಿಕೆಯಲ್ಲಿ 800 ಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ ಅಳಿಯನ ವಿರುದ್ಧ ಸಿಐಡಿಗೆ ದೂರು ನೀಡಲಾಗಿದೆ. ಮಾಜಿ ಕಾರ್ಪೊರೇಟರ್ ಎನ್ಆರ್ ರಮೇಶ್ ಅವರಿಂದ ದೂರು ನೀಡಲಾಗಿದೆ.
ಸಾರ್ವಜನಿಕ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್.. ಸಾರ್ವಜನಿಕರ ಮೆಚ್ಚುಗೆ..!
ಕಲಬುರಗಿ ಕ್ಷೇತ್ರದ ಅಭ್ಯರ್ಥಿ ಮತ್ತು ಮೆಡಿಕಲ್ ಕಾಲೇಜಿನ ಮುಖ್ಯಸ್ಥ ರಾಧಾಕೃಷ್ಣ ದೊಡ್ಡಮನಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದ್ದು, ಈ ಕುರಿತಾಗಿ ಎನ್ಆರ್ ರಮೇಶ್ 900 ಪುಟಗಳ ದಾಖಲೆ ಬಿಡುಗಡೆ ಮಾಡಿದ್ದಾರೆ. ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಸಚಿವ ಮಹದೇವ್ ಪ್ರಸಾದ್, ಡಾ.ಟಿ.ಮುರಳಿ ಮೋಹನ್, ಕುಬೇರ್ ಅಮಾನುಲ್ಲಾ ಖಾನ್ ವಿರುದ್ಧ N.R.ರಮೇಶ್ ದೂರು ದಾಖಲಿಸಿದ್ದಾರೆ
ರಾಧಾಕೃಷ್ಣ ದೊಡ್ಡಮನಿ ಆಪ್ತ, ಡಿ ದರ್ಜೆ ನೌಕರ ಅಮಾನುಲ್ಲಾ ಖಾನ್ ಪಿಯು ಫೇಲಾದ ವಿದ್ಯಾರ್ಥಿಗಳಿಗೂ ಸೀಟು ಮಾರಿಕೊಂಡ ಆರೋಪ ಮಾಡಲಾಗಿದೆ. ಈವರೆಗೆ 6 ವಿದ್ಯಾರ್ಥಿಗಳಿಗೆ ಕಾಲೇಜು ಅಕ್ರಮವಾಗಿ ಸೀಟ್ ನೀಡಿದೆ. ರಾಜ್ಯ ಹಾಗೂ ದೇಶದ ವಿವಿಧೆಡೆ ಶ್ರೀಮಂತ ಮಕ್ಕಳನ್ನು ಹುಡುಕಿ ತಂದು ಅಕ್ರಮವಾಗಿ ಹಣ ಪಡೆದು MBBS ಹಾಗೂ BDS ಸೀಟ್ ಕೊಡಿಸುತ್ತಿದ್ದಾರೆಂದು ಅಮಾನುಲ್ಲಾ ವಿರುದ್ಧ ಆರೋಪಿಸಲಾಗಿದೆ. ಹೀಗಾಗಿ ಕಾಲೇಜು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ N.R.ರಮೇಶ್ ಆಗ್ರಹಿಸಿದ್ದಾರೆ.