ಕಾರವಾರ: ಎಸ್.ಟಿ.ಸೋಮಶೇಖರ್ ಮಾತು ಸತ್ಯ ಇರಬಹುದು. ಸೋಮಶೇಖರ್ ಅವರ ಮಾತು ನೋಡಿದರೆ ಅವರಿಗೆ ಖಚಿತ ಮಾಹಿತಿ ಇರಬಹುದು. ಹಾಗಾಗಿ, ಸೋಮಶೇಖರ್ ಮಾತಿನಲ್ಲಿ ಸತ್ಯತೆ ಇರುತ್ತದೆ ಎಂದು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಬಿನ್ನಮತೀಯ ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದ್ದಾರೆ. ಯಲ್ಲಾಪುರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,
ಈ ಬಗ್ಗೆ ಮಾತನಾಡಲು ಸೋಮಶೇಖರ್ ಅವರಿಗೆ ಪೋನ್ ಕರೆ ಮಾಡಿದ್ದೆ, ಆದ್ರೆ ಕರೆಗೆ ಸಿಕ್ಕಿಲ್ಲ. ನಾನು ಬಿಜೆಪಿಯಿಂದ ಒಂದು ಕಾಲನ್ನು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ಎರಡು ಕಾಲು ಹೊರಗೆ ಇಟ್ಟಿದ್ದೇನೆ ಅಂತಾನಾದ್ರೂ ಬರೆದುಕೊಳ್ಳಿ, ನಿಮ್ಮ ವಿವೇಚನೆಗೆ ಸೇರಿದ್ದು. ನಮ್ಮ ನಿರ್ಣಯ ನಮ್ಮ ಮುಖಂಡರ ಜತೆ ಚರ್ಚೆ ಮಾಡಿ ತೆಗೆದುಕೊಳ್ಳುತ್ತೇನೆ.
ಪಿಂಚಣಿದಾರರಿಗೆ ಗುಡ್ ನ್ಯೂಸ್: ಇನ್ನುಂದೆ ಮನೆಯಿಂದಲೇ “ಡಿಜಿಟಲ್ ಜೀವನ ಪ್ರಮಾಣ ಪತ್ರ” ಪಡೆಯಿರಿ!
ಇದು ರಾಜಕಿಯ ಕ್ಷೇತ್ರ, ಯಾವ ಸಂದರ್ಭ, ಯಾವ ನಿರ್ಣಯ ಕೈಗೊಳ್ಬೇಕು ಎಂಬುದು ನಮಗೆ ಗೊತ್ತು ಎಂದು ತಿಳಿಸಿದ್ದಾರೆ. ಉಪಚುನಾವಣೆಗೆ ಕಾಲ ಪಕ್ವವಾಗಿಲ್ಲ. ನಾನು ಯಾವ ಪಕ್ಷದ ಚುನಾವಣೆ ಪ್ರಚಾರಕ್ಕೂ ಹೋಗಿಲ್ಲ. ಬೊಮ್ಮಾಯಿ ಅವರು ನನಗೆ ಆತ್ಮೀಯರಾಗಿದ್ದು, ಪ್ರಚಾರಕ್ಕೆ ಕರೆದರೆ ಆಲೋಚನೆ ಮಾಡಿ ನಿರ್ಣಯಿಸುತ್ತೇನೆ ಎಂದರು.