ರಕ್ಷಿತ್ ಶೆಟ್ಟಿ ನಟನೆಯ ಸೂಪರ್ ಹಿಟ್ 777 ಚಾರ್ಲಿ ಸಿನಿಮಾ ನಿರ್ದೇಶನ ಮಾಡಿದ್ದ ನಿರ್ದೇಶಕ ಕಿರಣ್ ರಾಜ್ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದಿದೆ ಎಂಗೇಜ್ ಮೆಂಟ್ ಕಾರ್ಯಕ್ರಮದಲ್ಲಿ ಹಲವರು ಭಾಗಿಯಾಗಿ ಕಿರಣ್ ರಾಜ್ ಗೆ ಶುಭಹಾರೈಸಿದ್ದಾರೆ. ಅಂದ ಹಾಗೆ ಕಿರಣ್ ರಾಜ್ ಭರತನಾಟ್ಯ ಪ್ರವೀಣೆಯಾಗಿರುವ ಅನಯಾ ವಸುಧಾ ಎಂಬುವವರೊಂದಿಗೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ.
ಕಿರಣ್ ರಾಜ್ ಮದುವೆಯಾಗಲಿರುವ ಅನಯಾ ವಸುಧಾ ಭರತನಾಟ್ಯ ಪ್ರವೀಣೆಯಾಗಿದ್ದು ವಿದೇಶದಲ್ಲಿ ಹುಟ್ಟಿ ಬೆಳೆದಿದ್ದಾರೆ. ಇದೀಗ ಕಿರಣ್ ರಾಜ್ ಎಂಗೇಜ್ ಆಗಿರುವ ಫೋಟೋ ವೈರಲ್ ಆಗುತ್ತಿದೆ. ಜೊತೆಗೆ ಆಂಕರ್ ಅನುಶ್ರೀ ಕೂಡ ನವಜೋಡಿಗೆ ಶುಭಕೋರಿದ್ದಾರೆ. ಮದುವೆ ಯಾವಾಗ ಎಂಬುದು ತಿಳಿದುಬಂದಿಲ್ಲ.
ಚಾರ್ಲಿ ಸಿನಿಮಾ ಮೂಲಕ ಭಾರೀ ಖ್ಯಾತಿ ಗಳಿಸಿದರು. ರಕ್ಷಿತ್ ಶೆಟ್ಟಿ ಹಾಗೂ ಸಂಗೀತಾ ಶೃಂಗೇರಿ ಅವರು ಪ್ರಮುಖ ಪಾತ್ರಗಳಲ್ಲಿ ನಟಿಸಿರುವ 777 ಚಾರ್ಲಿ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹಿಟ್ ಆಯಿತು. ಡೈರೆಕ್ಟರ್ ಕಿರಣ್ರಾಜ್ಗೆ ಅತ್ಯುತ್ತಮ ಡೈರೆಕ್ಟರ್ ಪ್ರಶಸ್ತಿ ತಂದುಕೊಟ್ಟ ಚಾರ್ಲಿ ಸಿನಿಮಾ ಬೇರೆ ಭಾಷೆಯ ಪ್ರೇಕ್ಷಕರ ಮನಸು ಗೆಲ್ಲುವಲ್ಲಿ ಯಶಸ್ವಿಯಾಯಿತು. ಇದೀಗ ಡೈರೆಕ್ಟರ್ ಕಿರಣ್ ರಾಜ್ ಅವರು ಮತ್ತೊಂದು ಸಿನಿಮಾ ಮಾಡುವ ಸಿದ್ಧತೆಯಲ್ಲಿದ್ದಾರೆ.