ನವದೆಹಲಿ: 2,000 ರೂ. ಮುಖ ಬೆಲೆಯ ನೋಟನ್ನು ಬ್ಯಾನ್ ಮಾಡಿ ವರ್ಷಗಳೇ ಉರುಳಿದರೂ ಬರೋಬ್ಬರಿ 7,581 ಕೋಟಿ ಮೌಲ್ಯದ ನೋಟುಗಳು ಜನರ ಬಳಿ ಇನ್ನೂ ಇವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.
2,000 ರೂ. ಮುಖಬೆಲೆಯ ನೋಟುಗಳ ಪೈಕಿ 97.87% ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಯ ಮೂಲಕ ಹಿಂದಿರುಗಿವೆ. ಆದರೆ ಇಂದಿಗೂ 7,581 ಕೋಟಿ ಮೌಲ್ಯದ (2.13% ರಷ್ಟು) ನೋಟುಗಳು ಜನರ ಬಳಿಯೇ ಇದೆ ಎಂದು ಆರ್ಬಿಐ ಇಂದು ಮಾಹಿತಿ ಬಿಡುಗಡೆ ಮಾಡಿದೆ.
![Demo](https://ainlivenews.com/wp-content/uploads/2023/12/spoorthi-1.jpg)
ಚೆನ್ನೈನ ಐಫೋನ್ ಫ್ಯಾಕ್ಟರಿಯಲ್ಲಿ ವಿವಾಹಿತರಿಗೆ ನೋ ಎಂಟ್ರಿ..! ಏನಿದು ವಿವಾದ?
2023 ರ ಮೇ 19 ರಂದು 2 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಆರ್ಬಿಐ ಹಿಂಪಡೆದಿತ್ತು. 3.56 ಲಕ್ಷ ಕೋಟಿಯಷ್ಟು ನೋಟುಗಳು ಆ ಸಂದರ್ಭದಲ್ಲಿ ಚಲಾವಣೆಯಲ್ಲಿ ಇದ್ದವು. ಆ ಬಳಿಕ ಬ್ಯಾಂಕ್ಗಳಲ್ಲಿ ನೋಟು ಹಿಂಪಡೆಯಲು ಆರ್ಬಿಐ ಅವಕಾಶವನ್ನು ನೀಡಿತ್ತು.
![](https://ainlivenews.com/wp-content/uploads/2024/01/Ad-Banner-copy-scaled.jpg)