ನವದೆಹಲಿ:- ನರೇಂದ್ರ ಮೋದಿ ಅವರು 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಜಕೀಯ ಅಂತ್ಯವಾಯ್ತು ಎನ್ನುವಾಗಲೇ ಸೋಮಣ್ಣ ಕೈ ಹಿಡಿದ ಹೈಕಮಾಂಡ್…ಇನ್ನೂ ಕೇಂದ್ರ ಮಂತ್ರಿ!
ಮೋದಿ ಹೊರೆತು ಪಡಿಸಿ ಇಂದು ಒಟ್ಟು 72 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದರಲ್ಲಿ 61 ಮಂದಿ ಬಿಜೆಪಿ ಹಾಗೂ 11 ಎನ್ಡಿಎ ಒಕ್ಕೂಟ ಸಂಸದರಿದ್ದಾರೆ. 72 ಸಂಸದರಲ್ಲಿ 30 ಸಂಪುಟ ಹಾಗೂ 36 ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ನೂತನ ಮೋದಿ ಟೀಂಗೆ ಯಾವ ಖಾತೆಗಳನ್ನು ನೀಡಬೇಕೆಂಬ ಬಗ್ಗೆ ಇನ್ನೂ ನಿರ್ಧರಿಸಿಲ್ಲ. 73 ವರ್ಷದ ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಯುಪಿಎ ಆಡಳಿತದ ನಂತರ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿದ್ದರು. ಅವರು ಪ್ರಧಾನಿಯಾದ ನಂತರ ಮೊದಲ ಬಾರಿಗೆ ತಮ್ಮ 3ನೇ ಅವಧಿಗೆ ಅಥವಾ ಮೋದಿ 3.0ನಲ್ಲಿ ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಲಿದ್ದಾರೆ
ರಾಷ್ಟ್ರಪತಿ ಭವನದ ಹುಲ್ಲುಹಾಸಿನಲ್ಲಿ ಪ್ರಮಾಣ ವಚನ ಸಮಾರಂಭ ನಡೆಯುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರ ನೂತನ ಸಚಿವ ಸಂಪುಟದ ಸದಸ್ಯರು ಕೂಡ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜವಾಹರಲಾಲ್ ನೆಹರು ಅವರ ನಂತರ ನರೇಂದ್ರ ಮೋದಿ 3 ಅವಧಿಗೆ ಅಧಿಕಾರ ನಡೆಸಿದ ಮೊದಲ ಪ್ರಧಾನಿಯಾಗಲಿದ್ದಾರೆ. ನಿನ್ನೆ ಪ್ರಧಾನಿ ನಿವಾಸದಲ್ಲಿ 11 ಗಂಟೆಗಳ ಕಾಲ ನಡೆದ ಮ್ಯಾರಥಾನ್ ಸಭೆಯ ನಂತರ ನೂತನ ಸಚಿವ ಸಂಪುಟದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ
![](https://ainlivenews.com/wp-content/uploads/2024/01/Ad-Banner-copy-scaled.jpg)