ಬಾಲಿವುಡ್ ನಟ ಸಂಜಯ್ ದತ್ ತಮ್ಮದೇ ಆದ ಕೋಟ್ಯಾಂತರ ಅಭಿಮಾನಿ ಬಳಗ ಹೊಂದಿದ್ದಾರೆ. 135ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸಂಜಯ್ ದತ್ ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ್ದಾರೆ. 2018ರಲ್ಲಿ ನಡೆದ ಸಂಜಯ್ ದತ್ ಗೆ ಸೇರಿದ ಘಟನೆಯೊಂದು ಇದೀಗ ಮತ್ತೆ ಸುದ್ದಿಯಾಗಿದೆ.
2018ರಲ್ಲಿ ಸಂಜಯ್ ದತ್ ಅವರಿಗೆ ಪೊಲೀಸ್ ಠಾಣೆಯಿಂದ ಕಾಲ್ ಬಂದಿತ್ತು. ನಿಶಾ ಪಾಟಿಲ್ ಎಂಬ ಅಭಿಮಾನಿ ಅವರ 72 ಕೋಟಿ ರೂಪಾಯಿ ಆಸ್ತಿಯನ್ನು ಇವರ ಹೆಸರಿಗೆ ಬರೆದಿದ್ದರು. ನಟನಿಗೆ ಎಲ್ಲಾ ಆಸ್ತಿ ನೇರವಾಗಿ ಹಸ್ತಾಂತರ ಆಗಬೇಕು ಎಂದು ಬರೆದಿದ್ದು ಇದು ಅನೇಕರಿಗೆ ಅಚ್ಚರಿ ತಂದಿತ್ತು.
ಆದರೆ, ಸಂಜಯ್ ದತ್ ಅವರನ್ನು ಇದನ್ನು ಸ್ವೀಕರಿಸಿಲ್ಲ. ಅವರ ಲೀಗಲ್ ಟೀಂ ಈ ಬಗ್ಗೆ ಸ್ಪಷ್ಟನೆ ನೀಡಿತ್ತು. ‘ನಿಶಾ ಪಾಟೀಲ್ ಬಗ್ಗೆ ತಿಳಿದಿಲ್ಲ. ನಾನು ಅವರ ಆಸ್ತಿಯನ್ನು ಪಡೆದುಕೊಂಡಿಲ್ಲ’ ಎಂದು ಸಂಜಯ್ ದತ್ ಹೇಳಿದ್ದಾಗಿ ಸ್ಪಷ್ಟನೆ ಸಿಕ್ಕಿತ್ತು. ಈ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿತ್ತು. ಸಂಜಯ್ ದತ್ ಅವರಿಗೆ ಇಷ್ಟರ ಮಟ್ಟಿಗಿನ ಫ್ಯಾನ್ಸ್ ಇದ್ದಾರ ಎಂದು ಹಲವರಿಗೆ ಅಚ್ಚರಿಯಾಗಿತ್ತು.ʼ
ಸಂಜಯ್ ದತ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಯಶ್ ನಟನೆಯ ‘ಕೆಜಿಎಫ್ 2’ ಚಿತ್ರದಲ್ಲಿ ಅಧೀರನ ಪಾತ್ರ ಮಾಡಿ ಅವರು ಮಿಂಚಿದರು. ‘ಲಿಯೋ’ ಸಿನಿಮಾದಲ್ಲೂ ಅವರು ನಟಿಸಿದ್ದರು. ಇದೀಗ ಪ್ರೇಮ್ ನಟನೆಯ ‘ಕೆಡಿ’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದ್ದಾರೆ.