ತುಮಕೂರು:- ಅಪಾಯಕಾರಿ ವೀಲ್ಹಿಂಗ್ ಮಾಡಿದ್ದ 7 ಮಂದಿ ಪುಂಡರನ್ನು ತುಮಕೂರು ಜಿಲ್ಲೆ ಕೊರಟಗೆರೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೊರಟಗೆರೆ-ತುಮಕೂರು ರಸ್ತೆಯ ಅಜ್ಜಿಹಳ್ಳಿ ಬಳಿ ಪುಂಡರು ಬೈಕ್ ವೀಲಿಂಗ್ ಮಾಡುತ್ತಿದ್ದರು. ಸಾರ್ವಜನಿಕರ ಮೊಬೈಲ್ ನಲ್ಲಿ ಬೈಕ್ ವೀಲಿಂಗ್ ಪುಂಡರ ವಿಡಿಯೋ ಸೆರೆಯಾಗಿತ್ತು. ವಿಡಿಯೋ ಆಧರಿಸಿ ವೀಲ್ಹಿಂಗ್ ಮಾಡಿದ್ದವರನ್ನ ಕೊರಟಗೆರೆ ಪಿಎಸ್ಐ ಮಂಜುನಾಥ ಹಾಗೂ ಸಿಬ್ಬಂದಿ ಅರೆಸ್ಟ್ ಮಾಡಿದ್ದಾರೆ.
ಪುಂಡರ ವಿರುದ್ದ ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ರಿತ್ಯಾ ಕಾನೂನು ಕ್ರಮ ಕೈಗೊಳ್ಳಲಾಗಿದೆ. ತುಮಕೂರು ತಾಲೂಕಿನ ಗೇರಹಳ್ಳಿಯ
ಶಾಯಿದ್ (19) ಸಲ್ಮಾನ್ (20), ಸಾದತ್ (20)
ನಸೀಬ್ಉಲ್ಲಾ ( 19), ಸಾದಿಕ್ ಪಾಷ (19), ಫದ್ದೀನ್ ಖಾನ್ ( 21), ಸೀತಕಲ್ಲು ಪಾಳ್ಯದ ಇಸ್ಮಾಯಿಲ್ ಬಿನ್ ನಾಸೀರ್ ( 20) ಬಂಧಿತರು ಎನ್ನಲಾಗಿದೆ.