ರಾಯಚೂರು:- ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಗಬ್ಬೂರಿನಲ್ಲಿ ಬ್ಯಾಂಕ್ನಿಂದ ಡ್ರಾ ಮಾಡಿಕೊಂಡ ಬಳಿಕ ಹಣ್ಣು ಖರೀದಿಸಲು ಹೋಗಿದ್ದ ರೈತನ ಬೈಕ್ನಿಂದ ಬರೋಬ್ಬರಿ 7 ಲಕ್ಷ ರೂ. ಲೂಟಿ ಹೊಡೆದು ಪರಾರಿಯಾಗಿರುವ ಘಟನೆ ಜರುಗಿದೆ.
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಆರೋಪಿ ತರುಣ್ ರಾಜುಗೆ 14 ದಿನ ನ್ಯಾಯಾಂಗ ಬಂಧನ
ಹಣ ಕಳೆದುಕೊಂಡವರನ್ನು ಶ್ರೀನಿವಾಸ್ ಎಂದು ಗುರುತಿಸಲಾಗಿದೆ. ಕಳ್ಳತನ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೆಣಸಿನಕಾಯಿ ಮಾರಾಟ ಮಾಡಿದ್ದರಿಂದ ಬಂದ ಹಣವನ್ನು ಬ್ಯಾಂಕ್ನಿಂದ ಡ್ರಾ ಮಾಡಿಕೊಂಡಿದ್ದರು. ಈ ವೇಳೆ ಹಣವನ್ನು ಬೈಕ್ನಲ್ಲಿಯೇ ಬಿಟ್ಟು ಹಣ್ಣು ಖರೀದಿಸಲು ಹೋಗಿದ್ದಾರೆ. ಇದೇ ಸರಿಯಾದ ಸಮಯವೆಂದುಕೊಂಡು ಬಂದ ಕಳ್ಳರು ಬೈಕ್ನಲ್ಲಿದ್ದ 7 ಲಕ್ಷ ರೂ. ಹಣವನ್ನು ದೋಚಿದ್ದಾರೆ.
ಕಳ್ಳತನಕ್ಕೂ ಮುನ್ನ ಶ್ರೀನಿವಾಸ ರಾವ್ ಹಣ ಡ್ರಾ ಮಾಡಿಕೊಂಡಿದ್ದು, ಅದನ್ನು ಬೈಕ್ನಲ್ಲಿ ಬಿಟ್ಟು ಹೋಗಿದ್ದು, ಎಲ್ಲವನ್ನು ಸರಿಯಾಗಿ ಕಳ್ಳರು ಗಮನಿಸಿದ್ದರು. ಕೈಚಳಕ ತೋರಿಸಿ ಬೈಕ್ನಲ್ಲಿದ್ದ 7 ಲಕ್ಷ ರೂ. ಕದ್ದು ಪರಾರಿಯಾಗಿದ್ದಾರೆ.
ಸದ್ಯ ಶ್ರೀನಿವಾಸ ರಾವ್ ದೂರು ನೀಡಿದ್ದಾರೆ.