ಕಳೆದ ಕೆಲವು ದಿನಗಳಿಂದ ಆಗ್ನೇಯ ಚೀನಾದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಏಳು ಜನರು ಮೃತಪಟ್ಟಿದ್ದು, ಕನಿಷ್ಠ ಮೂವರು ನಾಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಉಷ್ಣವಲಯದ ಚಂಡಮಾರುತದಿಂದ ಇದುವರೆಗೂ ಮೃತಪಟ್ಟವರ ಸಂಖ್ಯೆ 22ಕ್ಕೇರಿದ್ದು, ಮೃತಪಟ್ಟವರೆಲ್ಲರೂ ಹುನಾನ್ ಪ್ರಾಂತ್ಯದವರಾಗಿದ್ದಾರೆ.
ಜಿಕ್ಸಿಂಗ್ ನಗರದ ನಾಲ್ಕು ಹಳ್ಳಿಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಕಾಣೆಯಾಗಿದ್ದ ಮೂವರ ಮೃತದೇಹಗಳು ನಗರ ಸಮೀಪದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದು, ಮಣ್ಣು ಕುಸಿತದಿಂದ ಇವರು ಸಾವಿಗೀಡಾಗಿದ್ದಾರೆ ಎನ್ನಲಾಗುತ್ತಿದೆ.
ಮಳೆಯಿಂದ ನೂರಾರು ಮನೆಗಳಿಗೆ ಹಾನಿಯಾಗಿದ್ದು, 11 ಸಾವಿರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಸುದ್ದಿಸಂಸ್ಥೆಯೊಂದು ವರದಿಯಲ್ಲಿ ಉಲ್ಲೇಖಿಸಿದೆ.