ನವರಾತ್ರಿ ಹಬ್ಬದ ಆರನೇ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆ ಮಹಿಷಾಸುರ ಮರ್ದಿನಿ, ಸುಜನರಕ್ಷಕಿ. ಈ ದಿನ ತಾಯಿಯನ್ನು ಪೂಜಿಸುವವರಿಗೆ ಆಯುರಾರೋಗ್ಯ ಭಾಗ್ಯ ಸದಾ ಇರುತ್ತದೆ ಇರುತ್ತದೆ. ಕಾತ್ಯಾಯಿನಿ ದೇವಿಯನ್ನು ಶತ್ರುಗಳಿಂದ ಮತ್ತು ತೊಂದರೆಗಳಿಂದ ಮುಕ್ತಿ ನೀಡುವವಳು ಎಂದು ಪರಿಗಣಿಸಲಾಗಿದೆ.
ದೇವತೆಗಳನ್ನು ರಾಕ್ಷಸರಿಂದ ರಕ್ಷಿಸಿದ ದೇವತೆ ಈಕೆ. ಈ ತಾಯಿ ಮಹಿಷಾಸುರನನ್ನು ಕೊಂದಳು, ನಂತರ ಶುಂಭ ಮತ್ತು ನಿಶುಂಭರನ್ನೂ ಕೂಡ ಕೊಂಡಳು. ಅಷ್ಟೇ ಅಲ್ಲ, ರಾಕ್ಷಸರು ಸೆರೆಯಲ್ಲಿ ಇಟ್ಟಿದ್ದ ಎಲ್ಲಾ ಒಂಬತ್ತು ಗ್ರಹಗಳು ಕೂಡ ಈಕೆಯ ಮೂಲಕ ಬಿಡುಗಡೆ ಹೊಂದಿದವು.
ಕಾತ್ಯಾಯಿನಿ ದೇವಿಗೆ ಸಮರ್ಪಿತವಾದ ಆ ದಿನದ ನವರಾತ್ರಿ ಪೂಜೆಯು ಬಹಳ ಶ್ರೇಷ್ಠವಾದದ್ದು. ಈ ದಿನವನ್ನು ಮಹಾಶಶ್ತಿ ಎಂದು ಕೂಡ ಕರೆಯಲಾಗುತ್ತದೆ. ಇನ್ನು ಕಾತ್ಯಾಯನಿ ಪೂಜೆಯಿಂದ ವ್ಯಕ್ತಿಯು ಉನ್ನತ ಸಾಮಾಜಿಕ ಸ್ಥಾನಮಾನವನ್ನು ಪಡೆದುಕೊಳ್ಳುತ್ತಾನೆ. ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರೆ ಸಮೃದ್ಧಿ ಮತ್ತು ಸಂಪತ್ತನ್ನು ದೇವಿ ನೀಡುತ್ತಾಳೆ ಎಂಬ ನಂಬಿಕೆ ಇದೆ.
ನವರಾತ್ರಿಯ ಆರನೇ ದಿನ ದೇವಿಯ ಆರಾಧನೆ ಹಾಗೂ ವಿಶೇಷ ಮಂತ್ರಗಳಿಂದ ಪೂಜೆ ಮಾಡಲಾಗುವುದು. ಸೂಕ್ತ ರೀತಿಯಲ್ಲಿ ಶುದ್ಧ ಮನಸ್ಸಿನಿಂದ ಪೂಜೆ ಮಾಡುವುದರಿಂದ ದೇವಿ ಕೃಪೆಗೆ ಪಾತ್ರರಾಗಬಹುದು.
ಕಾತ್ಯಾಯನಿ ದೇವಿಯ ಪ್ರಾಮುಖ್ಯತೆ:
ಕಾತ್ಯಾಯಿನಿ ದೇವಿಯು ಗುರು ಅಥವಾ ಬ್ರಹಸ್ಪತಿ ಗ್ರಹವನ್ನು ಆಳುವವಳಾಗಿದ್ದು, ಜ್ಯೋತಿಷ್ಯ ಶಾಸ್ತ್ರದಲ್ಲಿ ಬ್ರಹಸ್ಪತಿ ಅತ್ಯಂತ ಪ್ರಮುಖವಾದ ಗ್ರಹವಾಗಿದೆ. ಗುರು ಗ್ರಹದ ದೃಷ್ಟಿ ಹಾಗೂ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಜೀವನದಲ್ಲಿ ಅಪಾರ ಸಮೃದ್ಧಿ ಹಾಗೂ ಯಶಸ್ಸನ್ನು ಪಡೆಯುತ್ತಾನೆ ಎಂದು ಹೇಳಲಾಗುವುದು. ಕಾತ್ಯಾಯಿನಿ ದೇವಿಯ ಆರಾಧನೆ ಮಾಡುವುದರಿಂದ ಭಕ್ತರು ಗುರು ಗ್ರಹದಿಂದ ಪಡೆಯಬಹುದಾದ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಕುಂಡಲಿಯಲ್ಲಿ ಗುರುಗ್ರಹದ ತೊಂದರೆ ಇದ್ದರೆ ಪರಿಹಾರ ಕಾಣುವುದು.
ಪೂಜೆಯ ಮಹತ್ವ:
ಕಾತ್ಯಾಯಿನಿ ಮಾತೆಯನ್ನು ಪೂಜಿಸುವುದರಿಂದ, ಒಬ್ಬ ವ್ಯಕ್ತಿಯು ಧನಾತ್ಮಕ ಶಕ್ತಿಯನ್ನು ಪಡೆಯುತ್ತಾನೆ. ಹಾಗೂ ದುಷ್ಟ ಭಯ ನಿವಾರಣೆಯಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಕಾತ್ಯಾಯಿನಿ ದೇವಿಯನ್ನು ಪೂಜಿಸುವುದರಿಂದ ದಾಂಪತ್ಯದಲ್ಲಿನ ಸಮಸ್ಯೆಗಳು ದೂರವಾಗುತ್ತವೆ. ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೂ ಪರಿಹಾರ ದೊರೆಯುತ್ತದೆ. ಮದುವೆಯಾಗದಿರುವವರು ಕಾತ್ಯಾಯಿನಿ ಮಂತ್ರವನ್ನು ಪಠಿಸುವುದರಿಂದ ಜಾತಕದಲ್ಲಿನ ದೋಷ ಪರಿಹಾರವಾಗಿ ಕಂಕಣ ಭಾಗ್ಯ ಕೂಡಿ ಬರುತ್ತದೆ.
ಕಾತ್ಯಾಯಿನಿ ದೇವಿಯ ಅನುಗ್ರಹ ಪಡೆಯಲು ಯಾವ ಮಂತ್ರ ಪಠಿಸಬೇಕು?
– ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ
– ಯಾ ದೇವಿ ಸರ್ವಭೂತೇಷು ಮಾಂ ಕಾತ್ಯಾಯಿನೀ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
– ಓಂ ದೇವಿ ಕಾತ್ಯಾಯಿನ್ಯೈ ನಮಃ
– ಕಾತ್ಯಾಯನಿ ಮಹಾಮಾಯೇ ಮಹಾಯೋಗಿನ್ಯಧೀಶ್ವರಿ ನಂದಗೋಪಸುತಂ ದೇವಿಪತಿಂ ಮೇ ಕುರು ತೇ ನಮಃ
– ಓಂ ಹ್ರೀಂ ಕಾತ್ಯಾಯನ್ಯೈ ಸ್ವಾಹಾ , ಹ್ರೀಂ ಶ್ರೀಂ ಕಾತ್ಯಾಯನ್ಯೈ ಸ್ವಾಹಾ
– ಓಂ ದೇವಿ ಕಾತ್ಯಾಯಿನಿ ನಮಃ
-ಓಂ ದೇವಿ ಕಾತ್ಯಾಯಿನಿ ನಮಃ ಚಂದ್ರಹಾಸೋಜ್ವಲ ಕಾರಾ ಶಾರದುಲ್ವರ್ವವಾಹನ ಕಾತ್ಯಾಯಿನಿ ಶುಭಂ ದದ್ಯಾದ ದೇವಿ ದಾನವಘಾತಿನಿ
– ಕಾತ್ಯಾಯನಮುಖ ಪತು ಕಾಮ್ ಸ್ವಾಹಸ್ವರೂಪಿಣಿ ಲಲತೇ ವಿಜಯಾ ಪತು ಮಾಲಿನಿ ನಿತ್ಯ ಸುಂದರಿ ಕಲ್ಯಾಣಿ ಹೃದಯಮ್ ಪತು ಜಯಾ ಭಗಮಾಲಿನಿ
-ಕಾತ್ಯಾಯಿನಿ ದೇವಿಯ ಧ್ಯಾನ;
ವಂದೇ ವಂಚಿತ ಮನೋರಥಾರ್ಥ ಚಂದ್ರಾದ್ರಕೃತಾಶೇಖರಂ ಸಿಂಹರುದ್ಧ ಚತುರ್ಭುಜ ಕಾತ್ಯಾಯಿನಿ ಯಶಸ್ವಿನಿಮ್ ಸ್ವರ್ಣವರ್ಣ ಅಜ್ನಾಚಕ್ರ ಸ್ಥಿತಂ ಶಷ್ಟಮಾ ದುರ್ಗಾ ತ್ರಿನೇತ್ರಂ ವರಭೀತ ಕರಮ್ ಶಂಗಪದಾಧಾರಂ ಕಾತ್ಯಾಯನಸುತಂ ಭಜಾಮಿ ಪತಂಬರಾ ಪರಿಧನಂ ಸ್ಮೇರಮುಖಿ ನಾನಾಲಂಕಾರ ಭೂಷಿತಂ ಮಾಜಿರ, ಹರಾ, ಕೇಯುರಾ, ಕಿನಿಕಿನಿ, ರತ್ನಕುಂಡಲ ಮಂಡಿತಂ ಪ್ರಸನ್ನವದನಾ ಪಲ್ಲವಧಾರಂ ಕಾಂತ ಕಪೂಲಮ್ ತುಂಗಮ್ ಕುಂಚಮ್ ಕಾಮನಿಯಮ್ ಲಾವಣ್ಯಂ ತ್ರಿವಳಿ ವಿಭೂಷಿತ ನಿಮ್ನ ನಭೀಮ್