ಗದಗ: ರಾಜ್ಯಾದ್ಯಂತ 69ನೇ ಕನ್ನಡ ರಾಜ್ಯೋತ್ಸವ ಸಂಭ್ರಮ ಮನೆ ಮಾಡಿದ್ದು, ಗದಗ ಜಿಲ್ಲೆಯಲ್ಲೂ ರಾಜ್ಯೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಗಿದೆ. ಗದಗ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲರಿಂದ ಧ್ವಜಾರೋಹಣ ನೇರವೇರಿಸಲಾಯಿತು. ಧ್ವಜಾರೋಹಣ ಬಳಿಕ ಗೌರವ ವಂದನೆ ಸ್ವೀಕರಿಸಿದರು.
Deepavali Sweets: ಈ ದೀಪಾವಳಿಗೆ ಮನೆಯಲ್ಲೇ ಮಾಡಿ ಕಾಜು ಬರ್ಫಿ..! ಸುಲಭದ ರೆಸಿಪಿ ಇಲ್ಲಿದೆ
ಪೊಲೀಸ್, ಡಿ.ಆರ್ ಪಡೆ, ಎನ್.ಸಿ.ಸಿ, ಸ್ಕೌಟ್ ಆಂಡ್ ಗೈಡ್ಸ್, ಎನ್.ಎಸ್.ಎಸ್, ಅರಣ್ಯ ಇಲಾಖೆ ಸೇರಿದಂತೆ ಅನೇಕ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಸಲಾಯಿತು. ಭುವನೇಶ್ವರಿ ಭಾವಚಿತ್ರ ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳು ಭವ್ಯ ಮೆರವಣಿಗೆ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ ವಿ. ಪ. ಸದಸ್ಯ ಎಸ್.ವಿ ಸಂಕನೂರ, ಡಿಸಿ, ಎಸ್.ಪಿ, ಎಸಿ, ಸಿ.ಇ.ಓ ಸೇರಿದಂತೆ ಅನೇಕ ಅಧಿಕಾರಿಗಳು ಭಾಗಿಯಾಗಿದ್ದರು.