ಲಂಡನ್: ಆಸ್ಟ್ರೇಲಿಯಾಕ್ಕೆ (Australia) 600 ಕೋಟಿ ರೂ. ಮೌಲ್ಯದ ಕೊಕೇನ್ (Cocaine) ರಫ್ತು ಮಾಡಿದ ಆರೋಪದಲ್ಲಿ ಭಾರತೀಯ ಮೂಲದ ದಂಪತಿಗೆ ಯುಕೆನಲ್ಲಿ (U.K) ಶಿಕ್ಷೆ ವಿಧಿಸಲಾಗಿದೆ.
ಅರ್ತಿ ಧೀರ್ (59) ಮತ್ತು ಕವಲ್ಜಿತ್ಸಿನ್ಹ್ ರೈಜಾಡಾ (35) ಶಿಕ್ಷೆಗೆ ಒಳಗಾದ ದಂಪತಿ. ಭಾರತ ಮೂಲದ (Indian Origin Couple) ಈ ದಂಪತಿ 512 ಕಿಲೋ ಕೊಕೇನ್ ಅನ್ನು ಮೇ 2021 ರಲ್ಲಿ ಯುಕೆಯಿಂದ ಆಸ್ಟ್ರೇಲಿಯಾಕ್ಕೆ ವಾಣಿಜ್ಯ ವಿಮಾನದ ಮೂಲಕ ಕಳ್ಳಸಾಗಣಿಕೆ ಮಾಡಿದ ಪ್ರಕರಣದಲ್ಲಿ ಈಗ ಶಿಕ್ಷೆ ವಿಧಿಸಲಾಗಿದೆ.
ಸೌತ್ವಾಕ್ ಕ್ರೌನ್ ಕೋರ್ಟ್ನಲ್ಲಿ ಪ್ರಕರಣ ಸಂಬಂಧ ವಿಚಾರಣೆ ನಡೆಯಿತು. ಈಲಿಂಗ್ನಲ್ಲಿನ ಹ್ಯಾನ್ವೆಲ್ನಿಂದ ಬಂದ ದಂಪತಿಯ 12 ರಫ್ತು ಮತ್ತು ಅಕ್ರಮ ಹಣ ವರ್ಗಾವಣೆಯ 18 ಪ್ರಕರಣದ ಕೇಸ್ ಅದೇ ನ್ಯಾಯಾಲಯದಲ್ಲಿ ಮಂಗಳವಾರ (ಫೆ.6) ರಂದು ನಡೆಯಲಿದೆ