ಇತ್ತೀಚಿನ ದಿನಗಳಲ್ಲಿ ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳು ಮೊಬೈಲ್ ಬಳಸುತ್ತಿದ್ದಾರೆ. ನಿತ್ಯ ಸಾಕಷ್ಟು ಸಮಯ ಮೊಬೈಲ್ ನಲ್ಲಿಯೇ ಮುಳುಗಿರುತ್ತಾರೆ. ದೊಡ್ಡವರಿಗಿಂತ ಚೆನ್ನಾಗಿ ಮೊಬೈಲ್ ಬಳಸುವುದನ್ನು ಮಕ್ಕಳು ಕಲಿತಿರುತ್ತಾರೆ. ಅದನ್ನ ಫೋಷಕರು ಪ್ರೆಸ್ಟಿಜ್ ರೀತಿಯಲ್ಲಿ ಬಿಂಬಿಸುತ್ತಾರೆ. ಆದರೆ ಮುಂದೆ ಅದೇ ಅಭ್ಯಾಸ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.
ಇತ್ತೀಚೆಗೆ ನಡೆಸಿದ ಸಮೀಕ್ಷೆಯ ಪ್ರಕಾರ 5 ರಿಂದ 16 ವರ್ಷ ವಯಸ್ಸಿನ ಸುಮಾರು 60 ಪ್ರತಿಶತದಷ್ಟು ಮಕ್ಕಳು ಡಿಜಿಟಲ್ ವ್ಯಸನದ ಬಲಿಪಶುಗಳಾಗುವ ಎಲ್ಲಾ ಸಾಧ್ಯತೆಗಳಿವೆ. 1000 ಪೋಷಕರು ವರದಿ ಮಾಡಿದ ಮಕ್ಕಳ ವರ್ತನೆಯಿಂದ ಇದನ್ನು ಅಂದಾಜಿಸಲಾಗಿದೆ.
ಮಕ್ಕಳು ಮೊಬೈಲ್ ನಲ್ಲೇ ಹೆಚ್ಚು ಸಮಯ ಕಳೆಯೋದ್ರಿಂದ ಕಳಪೆ ನಿದ್ರೆಯ ಗುಣಮಟ್ಟ, ಕಡಿಮೆ ದೈಹಿಕ ಚಟುವಟಿಕೆ, ಕಡಿಮೆ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕ್ಷಮತೆ ಸೇರಿದಂತೆ ವಿವಿಧ ಅಪಾಯಗಳನ್ನು ಮೊಬೈಲ್ನಂತಹ ಡಿಜಿಟಲ್ ಮಾಧ್ಯಮಗಳ ಸ್ಕ್ರೀನ್ ಸೃಷ್ಟಿಸುತ್ತಿದೆ.
ಆರೋಗ್ಯ ತಜ್ಞರು ದಿನಕ್ಕೆ 2-3 ಗಂಟೆಗಳ ಕಾಲ ಮಾತ್ರ ಮೊಬೈಲ್ ಬಳಸಲು ಶಿಫಾರಸು ಮಾಡುತ್ತಾರೆ. ಏಕೆಂದರೆ ಸ್ಕ್ರೀನ್ ಸಣ್ಣದಿರುವುದರಿಂದ ಇದು ಕಣ್ಣುಗಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಈ ಸಮಯದ ಮಿತಿ ವಯಸ್ಕರಿಗೆ. ಚಿಕ್ಕ ಮಕ್ಕಳು ಮೊಬೈಲ್ ಬಳಸದೇ ಇರುವುದು ಉತ್ತಮ.
ಡಿಜಿಟಲ್ ಚಟವು ಉದ್ವೇಗ ನಿಯಂತ್ರಣ ಅಸ್ವಸ್ಥತೆಯಾಗಿದೆ. ಇದನ್ನು ಇಂಟರ್ನೆಟ್ ಅಡಿಕ್ಷನ್ ಡಿಸಾರ್ಡರ್ ಎಂದೂ ಕರೆಯುತ್ತಾರೆ. ಇದರಲ್ಲಿ ಡಿಜಿಟಲ್ ಸಾಧನಗಳು, ಡಿಜಿಟಲ್ ತಂತ್ರಜ್ಞಾನ ಮತ್ತು ಸಾಮಾಜಿಕ ಮಾಧ್ಯಮದಂತಹ ವೇದಿಕೆಗಳನ್ನು ಬಳಸುವ ಅಗತ್ಯವನ್ನು ಅನುಭವಿಸಲಾಗುತ್ತದೆ.
ಮಕ್ಕಳನ್ನು ಮೊಬೈಲ್ ಫೋನ್ಗಳಿಂದ ದೂರವಿರಿಸಲು ಹೊರಾಂಗಣ ಆಟಗಳು ಮತ್ತು ಚಟುವಟಿಕೆಗಳಲ್ಲಿ ತೊಡಗಿಸಬೇಕು. ಮಗುವಿನ ಮುಂದೆ ಪೋಷಕರು ಹೆಚ್ಚು ಮೊಬೈಲ್ ಬಳಸದೆ ಅವರೊಂದಿಗೆ ಬೆರಯಬೇಕು.