ಬೆಂಗಳೂರು: ಪರಾಧ ಕೃತ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಎಷ್ಟೇ ಕ್ರಮಗಳನ್ನು ಕೈಗೊಂಡರು ಸಹ ಅಪರಾಧ ಕೃತ್ಯಗಳು ಮಾತ್ರ ನಿಂತಿಲ್ಲ..ಇಂದು ಬೆಳಂ ಬೆಳಗ್ಗೆ ವೃದ್ಧ ದಂಪತಿಗಳ ಮನೆಗೆ ಮಂತ್ರ ಹಾಕಿಸಿಕೊಳ್ಳಲು ಅಪರಿಚಿತ ವ್ಯಕ್ತಿ ಒಬ್ಬ ಬಂದಿದ್ದ..ಮಂತ್ರಂ ಕೂಡ ಹಾಕಿಸ್ಕೊಂಡಿದ್ದ ..ಒಂಟಿ ಯಾಗಿದ್ದ ದಂಪತಿಗಳನ್ನು ವಾಚ್ ಮಾಡಿದ್ದ ವೃದ್ದೆಯ ಕತ್ನಲ್ಲಿದ್ದ ಅರವತ್ತು ಗ್ರಾಮ್ ಚೈನನ್ನು ಕದ್ದು ಎಸ್ಕೇಪ್ ಆಗಿದ್ದಾನೆ ಇದರಿಂದ ಇಡೀ ಏರಿಯನೇ ಬೆಚ್ಚಿಬಿದ್ದಿದೆ…
ಮನೆಯಲ್ಲ ರಕ್ತ ಗೋಡೆಯಲ್ಲ ರಕ್ತದ ಕಲೆ ಏನಾಯ್ತು ಅಂತ ಕಣ್ಣು ಕಣ್ಣು ಬಿಡುತ್ತಿರುವ ಜನ … ಮನಸಲ್ಲಿ ಆತಂಕ.. ವೃದ್ಧಗೆ ಚಿಕಿತ್ಸೆ ಕೊಡುತ್ತಿರುವ ಹಾಸ್ಪಿಟಲ್ ಸಿಬ್ಬಂದಿ.. ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಲಕ್ಷ್ಮಿ ಚಿತ್ರಮಂದಿರದ ರಸ್ತೆಯಲ್ಲಿ… ಹೀಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಯಸ್ಸಾದ ತಾಯಿ ಹೆಸರು ಅಕ್ಕಯಮ್ಮ ಅಂತ .. ಗಂಡ ನಾರಾಯಣ ಆಚಾರಿ ಅಂತ ಇಬ್ರು ಕೂಡ ಒಂದೇ ಮನೆಯಲ್ಲಿ ವಾಸವಾಗಿದ್ದರು .. ಇನ್ನು ನಾರಾಯಣ ಆಚಾರಿ ನಾಟಿ ವೈದ್ಯನಾಗಿದ್ದ , ಸಣ್ಣಪುಟ್ಟ ಮಕ್ಕಳಿಗೆ ಮಂತ್ರ ಹಾಕಿ ಜನರಿಗೆ ಪ್ರೀತಿ ಪಾತ್ರನಾಗಿದ್ದ .. ಆದ್ರೆ ಇವತ್ತು ಅದೇ ಆತನಿಗೆ ಪ್ರಾಣಕ್ಕೆ ಕುತ್ತು ತಂದಿದೆ…ಇಂದು ಬೆಳ್ಳಂ ಬೆಳಗ್ಗೆ ಅಪರಿತ ವ್ಯಕ್ತಿ ಯೊಬ್ಬ ಮಂತ್ರ ಹಾಕಿಕೊಳ್ಳಲು ಬಂದಿದ್ದ .. ಒಂಟಿಯಾಗಿ ಇದ್ದ ದಂಪತಿಗಳ ನ್ನ ನೋಡಿ ಹೊಂಚು ಹಾಕಿದ್ದ.. ವೃದ್ದೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ನೀಡುವಂತೆ ಬೆದರಿಕೆ ಹಾಕಿದ್ದ ವೃದ್ದೆ ಪ್ರತಿರೋಧ ಮಾಡಿದಕ್ಕೆ ಮನೆಯಲ್ಲಿದೆ ಚಾಕುವಿನಿಂದ ವೃದ್ದೆ ಯ ಕತ್ತು ಸೀಳಿದ್ದಾನೆ.. ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕದ್ದು ಎಸ್ಕೇಪ್ ಆಗಿದ್ದಾನೆ.. ಇನ್ನು ವೃದ್ದೆಯ ಚಿರಾಟ ಕೂಗಾಟ ಕೇಳಿ ಅಕ್ಕಪಕ್ಕದ ನಿವಾಸಿಗಳು ಸಹಾಯಕ್ಕೆ ಬಂದಿದ್ದರು..

ಇನ್ನು ಮಕ್ಕಳಿಂದ ದೂರಾಗಿದ್ದ ದಂಪತಿಗಳು ಒಂದೇ ಮನೆಯಲ್ಲಿ ಗಂಡ ಹೆಂಡತಿ ಸಾಕಷ್ಟು ವರ್ಷಗಳಿಂದ ವಾಸವಾಗಿದ್ದರು ನಾರಾಯಣ್ ಆಚಾರಿ ಮತ್ತು ಅಕ್ಕಯಮ್ಮ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.. ವೃದ್ಧರು ಮಾತ್ರ ಮನೆಯಲ್ಲಿ ಇರುವುದನ್ನು ಕಂಡು ಕಳ್ಳ ಏಕಾ ಏಕಿ ಮನೆಯೊಳಗೆ ನುಗ್ಗಿದ್ದ ಮನೆ ಬಾಗಿಲು ಹಾಕಿ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕೊಡುವಂತೆ ಬೆದರಿಕೆ ಸಹ ಹಾಕಿದ್ದ ..ಸರ ಕೊಟ್ಟಿಲ್ಲ ಕಾರಣಕ್ಕೆ ಮನೆಯಲ್ಲಿದ್ದ ಚಾಕು ವಿಂದ ಕತ್ತು ಸಿಳು ಎಸ್ಕೇಪ್ ಆಗಿದ್ದಾನೆ. ಇನ್ನು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ಆನೇಕಲ್ ವಿಜಯಾ ನರ್ಸೀಂಗ್ ಹೊಮ್ ಆಸ್ಪತ್ರೆ ಗೆ ಶಿಫ್ಟ್ ಮಾಡಲಾಗಿತ್ತು..
ಒಟ್ನಲ್ಲಿ ಕೂಲಿನಾಲಿ ಮಾಡಿ ತಂದೆ ತಾಯಿ ಮಕ್ಕಳನ್ನ ಕಷ್ಟಪಟ್ಟು ಓದಿಸಿ ಎತ್ತರ ಸ್ಥಾನಕ್ಕೆ ನಿಲ್ಲಿಸ್ತಾರೆ .. ಆದರೆ ಮಕ್ಕಳು ಮಾತ್ರ ತಂದೆ-ತಾಯಿ ಇಂದ ದೂರಾಗಿ ಬೇರೆ ಕಡೆ ವಾಸಿಸುತ್ತಿದ್ದಾರೆ ಇದರಿಂದಲೇ ಇಂತ ಘಟನೆಗಳು ನಡೆಯುತ್ತಿರುವುದು ಹಾಗಾಗಿ ಇಂತಹದನ್ನ ಕಡಿಮಣ ಆಗಬೇಕಿದೆ ..ಇನ್ನು ಸದ್ಯ ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸ್ರು ಭೇಟಿ ನೀಡಿ ಎಲ್ಲಾ ಆಯಾಮಗಳಲ್ಲಿ ತನಿಖೆಯನ್ನು ಮುಂದುವರಿಸಿದ್ದಾರೆ ಆರೋಪಿ ಪತ್ತೆಗಾಗಿ ಕೂಡ ಬಲೆ ಬಿಸಿಲಾಗಿದೆ .. ಆದಷ್ಟು ಬೇಗ ಆರೋಪಿಯನ್ನು ಪತ್ತೆ ಹಚ್ಚವಲ್ಲಿ ಪೊಲೀಸ್ ಯಶಸ್ವಿ ಅಗುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ..

