ಶಿವಮೊಗ್ಗ:- ಜಿಂಕೆ ಪ್ರತಿಮೆ ಉರುಳಿಬಿದ್ದು 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ತಾಲೂಕಿನ ಮುದ್ದಿನಕೊಪ್ಪದ ಟ್ರೀ ಪಾರ್ಕ್ನಲ್ಲಿ ಜರುಗಿದೆ.
ಹರೀಶ್, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಮೃತ ರ್ದುದೈವಿ ಎಂದು ಹೇಳಲಾಗಿದೆ. ಭಾನುವಾರ ಹಿನ್ನೆಲೆ ಕುಟುಂಬಸ್ಥರು ಮಕ್ಕಳೊಂದಿಗೆ ಟ್ರೀ ಪಾರ್ಕ್ಗೆ ತೆರಳಿದ್ದರು. ಈ ವೇಳೆ ಆಟವಾಡುತ್ತಿದ್ದಾಗ ಏಕಾಏಕಿ ಜಿಂಕೆ ಪ್ರತಿಮೆ ಉರುಳಿಬಿದ್ದು ಬಾಲಕಿ ಕೊನೆಯುಸಿರೆಳೆದಿದ್ದಾರೆ. ಈ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.