ವಿಜಯಪುರ:- ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಜಾಕವೆಲ್ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಜನರು ನೀರುಪಾಲಾಗಿರುವ ಘಟನೆ ನಡೆದಿದೆ.
ಪೊಲೀಸರು ಬರುತ್ತಾರೆಂದು ಮಾಹಿತಿ ಸಿಕ್ಕ ಬೆನ್ನಲೇ ಭಯದಿಂದ ನದಿ ತಟದಲ್ಲಿ ಇಸ್ಪೀಟ್ ಆಟವಾಡುತ್ತಿದ್ದ ಗುಂಪು ತೆಪ್ಪದ ಮೂಲಕ ತಪ್ಪಿಸಿಕೊಳ್ಳಲು ಮುಂದಾಗಿದೆ. ಆದ್ರೆ, ದುರ್ವೈವ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಆರು ಜನರು ಜಲಸಮಾಧಿಯಾಗಿದ್ದು, ಇನ್ನಿಬ್ಬರು ಈಜಿ ಹೋಗಿ ದಡ ಸೇರಿದ್ದಾರೆ.
ಸ್ಥಳಕ್ಕೆ ಕೊಲ್ಹಾರ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹಗಳಿಗಾಗಿ ಹುಡುಕಾಟ ನಡೆಸಿದ್ದು, ಸದ್ಯದ ಮಾಹಿತಿ ಪ್ರಕಾರ ಇಬ್ಬರ ಶವ ಹೊರ ತೆಗೆದಿದ್ದಾರೆ. ಇನ್ನುಳಿದವರ ಮೃದೇಹಗಳಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.
ಕೃಷ್ಣ ನದಿ ತಟದಲ್ಲಿ ಗುಂಪೊಂದು ಇಸ್ಪೀಟ್ ಆಟವಾಡುತ್ತಿತ್ತು. ಸ್ಥಳಕ್ಕೆ ಪೊಲೀಸರು ಬರುತ್ತಿದ್ದಾರೆಂಬ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಭಯದಿಂದ ತಪ್ಪಿಸಿಕೊಳ್ಳಲು ತೆಪ್ಪದ ಮೂಲಕ ನದಿಯ ನಡುಗಡ್ಡೆಯತ್ತ ಹೊರಟ್ಟಿದ್ದಾರೆ. ಆದ್ರೆ, ದುರದೃಷ್ಟವಶಾತ್ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನಡು ನದಿಯಲ್ಲೇ ಮುಗುಚಿ ಬಿದ್ದಿದೆ. ಪರಿಣಾಮ ಇಬ್ಬರು ಈಜಿಕೊಂಡು ದಡ ಸೇರಿದ್ದರೆ, ಇನ್ನೂ ಆರು ಜನರು ಜಲಸಮಾಧಿಯಾಗಿದ್ದಾರೆ.