ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಆದ್ದರಿಂದ ಫೇಸ್ಬುಕ್, ವ್ಯಾಟ್ಸಾಪ್, ಇನ್ಸ್ಟಾಗ್ರಾಂ, ಟಿಕ್ಟಾಕ್, ಯೂಟ್ಯೂಬ್ ಸೇರಿದಂತೆ ಎಲ್ಲಾ ಸೋಶಿಯಲ್ ಮೀಡಿಯಾ ಮುಂದಿನ 6 ದಿನ ಸಂಪೂರ್ಣ ಬಂದ್ ಮಾಡಲು ಜುಲೈ4ರ ತಡ ರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ.
ಪಾಕಿಸ್ದಾನ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರಿಯಮ್ ನವಾಜ್ ಸೋಶಿಯಲ್ ಮೀಡಿಯ ಬ್ಯಾನ್ ಪ್ರಸ್ತಾವನೆ ಸಲ್ಲಿಸಿದ್ದರು. ಪಂಜಾಬ್ ಪ್ರಾಂತ್ಯದಲ್ಲಿ ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ಸಂದೇಶಗಳು, ವಿಡಿಯೋಗಳನ್ನು ಹರಡುವುದು ಹೆಚ್ಚಾಗುತ್ತಿದೆ. ಇದರಿಂದ ರಂಜಾನ್ ತಿಂಗಳಲ್ಲಿ ಶಾಂತಿ ಸುವ್ಯವಸ್ಥೆಗೆ ಅಡ್ಡಿಯಾಗುತ್ತಿದೆ. ಜೊತೆಗೆ ಪವಿತ್ರ ತಿಂಗಳಲ್ಲಿ ಈ ರೀತಿಯ ಘಟನೆಗೆ ಅವಕಾಶ ನೀಡದಂತೆ ತಡೆಯಲು ಈ ಕ್ರಮಕೈಗೊಂಡಿದೆ. ಜುಲೈ4ರ ತಡ ರಾತ್ರಿ ಪಂಜಾಬ್ ಪ್ರಾವಿನ್ಸ್ ಮುಖ್ಯಮಂತ್ರಿ ಈ ಆದೇಶ ಹೊರಡಿಸಿದ್ದಾರೆ.
ರಾತ್ರಿ 9 ಗಂಟೆಯ ನಂತ್ರ ಊಟ ಮಾಡ್ತೀರಾ..? ಹಾಗಿದ್ರೆ ಈ ಎಲ್ಲಾ ಸಮಸ್ಯೆಗಳು ಎದುರಾಗುವುದು ಗ್ಯಾರಂಟಿ
ಜುಲೈ 13ರಿಂದ 18ರ ವರೆಗೆ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾಗೆ ನಿರ್ಬಂಧ ವಿಧಿಸಲಾಗಿದೆ. ರಂಜಾನ್ ತಿಂಗಳಲ್ಲಿ ದ್ವೇಷಕಾರ ಮಾಹಿತಿಗಳು, ವಿಡಿಯೋ, ಫೋಟೋಗಳು, ಸಂದೇಶ ಹರಡದಂತೆ ತಡೆಯಲು ಪಾಕಿಸ್ತಾನ ಈ ಕ್ರಮ ಕೈಗೊಂಡಿದೆ. ಇದೇ ವೇಳೆ ಮರಿಯಮ್ ನವಾಜ್ ತಮ್ಮ ಅಂಕಲ್, ಪ್ರಧಾನಿ ನವಾಜ್ ಷರೀಫ್ಗೆ ಸಂಪೂರ್ಣ ಪಾಕಿಸ್ತಾನದಲ್ಲಿ ಸೋಶಿಯಲ್ ಮೀಡಿಯಾ ಬ್ಯಾನ್ ಮಾಡುವಂತೆ ಮನವಿ ಮಾಡಿದ್ದಾರೆ.
ರಂಜಾನ್ ತಿಂಗಳ ಪಾವಿತ್ರ್ಯತೆ ಕಾಪಾಡಲು ಇದು ಅತ್ಯವಶ್ಯಕ ಎಂದು ಮರಿಯಮ್ ನವಾಜ್ ಹೇಳಿದ್ದಾರೆ. ಇತ್ತ ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ಹಿಂದಿನಿಂದಲೂ ಸೋಶಿಯಲ್ ಮೀಡಿಯಾ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಇದು ಡಿಜಿಟಲ್ ಭಯೋತ್ಪಾದನೆಗೆ ಉತ್ತೇಜನ ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.