ರಾಯಬಾಗ :-ಸಕ್ಕರೆ ಸಚಿವರು ಆತ್ಮಹತ್ಯೆ ಮಾಡಿಕೊಂಡರೆ ರಾಜ್ಯ ರೈತರಿಂದ 6 ಕೋಟಿ ಕೊಡಲಾಗುತ್ತದೆ ಎಂದು ಇಲ್ಲಿನ ರೈತರು ಹೇಳಿದ್ದಾರೆ.
ತಾಲೂಕಿನ ತಹಶಿಲ್ದಾರ ಕಛೇರಿ ಬಾಗಿಲ ಬಂದ ಮಾಡಿ ರೈತರಿಂದ ಪ್ರತಿಭಟನೆ ಮಾಡಲಾಗಿದೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ರೈತರು ಸಾಲ ಮನ್ನಾ ಆಗುವುದಕ್ಕೆ ಬರಗಾಲ ಕಾಯುತ್ತಾರೆ ಎಂದು ರೈತರ ಬಗ್ಗೆ ಅವಹೇಳನಕಾರಿ ಹೇಳಿದ್ದಕ್ಕೆ ರಾಯಬಾಗ ತಾಲೂಕಿನ ರೈತ ಸಂಘದ ತಾಲೂಕ ಮುಖಂಡರಾದ ಮಾಯಪ್ಪ ಹೊಳಕರ ಮಾತನಾಡಿದರು.
ರೈತರು ಬರಗಾಲ ಪರಸ್ಥಿತಿಯಲ್ಲಿ ಯಾವದೇ ಸರ್ಕಾರ ಕೊಡೋ 10000 ಸಾವಿರಕ್ಕೆ ಯಾವ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲಾ ರೈತರು ಬೆಳೆದ 100 ಟನ್ನ ಕಬ್ಬದ 10ಲಕ್ಷ ಬರುತ್ತೆ 1ಲಕ್ಷ ಟ್ಯಾಕ್ಸ್ ಕಟ್ಟಾಗುತ್ತೆ ಆ ಹಣದಲ್ಲಿ ನಿಮ್ಮ್ ಹೊಟ್ಟೆ ತುಂಬಿಸಿ ಕೊಳ್ಳುತೆರಿ ಸಚಿವರೇ ರೈತರನ್ನು ಕೀಳಾಗಿ ನೊಡಬೇಡರಿ ಬೇಕಾದರೆ ಕರ್ಣಾಟಕ ರಾಜ್ಯದಂತ ರೈತರು ಕೂಡಿಕೊಂಡು ನಿಮಗೆ 6ಕೋಟಿ ಹಣ ಕೊಡುತ್ತೇವೆ ನೀವು ಆತ್ಮಹತ್ಯೆ ಮಾಡಿಕೊಳ್ಳಿ ಎಂದರು
ಹಾಗೂಮುಖ್ಯ ಮಂತ್ರಿ ಸಿದ್ದರಾಮ್ಯ ಅವರೇ ನಿಮ್ಮ ಸರ್ಕಾರದಿಂದ ಇಂತಹ ಸಚಿವ ಸ್ಥಾನದಿಂದ ಕೆಳಗಿಳಿಸಿ ಇಲ್ಲವಾದರೆ ಜಿಲ್ಲಾ ರಾಜ್ಯದಂತೆ ರೈತರ ಹೋರಾಟ ನಿಲ್ಲುವುದಿಲ್ಲ ಮುಂಬರುವ ದಿನಗಳಲ್ಲಿ ನಿಮ್ಮ ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದರು
ನಂತರ ಉಪ ತಸಿಲ್ದಾರ್ ಶ್ರೀ ಪರಮಾನಂದ ಮಂಗಸೂಳಿ ಇವರ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗೆ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಯನ್ನು ಸಲ್ಲಿಸಿದರು