ಹಾಸನ: ಅದಿ ದೇವತೆ ಹಾಸನಾಂಬೆ ದೇವಿ ದರ್ಶನಕ್ಕೆ ಮಂಗಳವಾರದಂದು ಕೊನೆಯ ದಿವಸವಾಗಿದ್ದು, ಇದುವರೆಗೂ ಲಾಡು ಮತ್ತು ಟಿಕೆಟ್ ವ್ಯಾಪಾರದಿಂದ 6 ಕೋಟಿಗೂ ಹೆಚ್ಚಿನ ಆಧಾಯ ದೇವಾಲಯಕ್ಕೆ ಬಂದಿದೆ ಎಂದು ಉಪವಿಭಾಗಧೀಕಾರಿ ಮಾರುತಿಗೌಡ ತಿಳಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಕ್ತರ ದರ್ಶನಕ್ಕೆ ಅವಕಾಶ ನೀಡಿ ಇಂದಿಗೆ ೧೪ ದಿನಗಳು ತಲುಪಿದ್ದು, ಇಲ್ಲಿವರೆಗೂ ೧೩ ಲಕ್ಷಕ್ಕೂ ಹೆಚ್ಚು ಜನರು ಹಾಸನಾಂಬೆ ದರ್ಶನ ಪಡೆದಿದ್ದು,
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಭಕ್ತರ ಸಂಖ್ಯೆ ಹೆಚ್ಚಾಗಿದ್ದರಿಂದ ೫ ಕೋಟಿ ೮೬ ಲಕ್ಷ ದೇವಾಲಯಕ್ಕೆ ಆಧಾಯ ಬಂದಿದೆ. ಮಂಗಳವಾರದಂದು ಸಂಜೆ 7 ಗಂಟೆಯವರೆಗೂ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಂತರ ರಾತ್ರಿ 11 ಗಂಟೆಯಿಂದ ಬುಧವಾರ ಬೆಳಿಗ್ಗೆ ಅವಕಾಶ ಕೊಡಲಾಗುವುದು. ನಂತರ ಯಾರಿಗೂ ದೇವಿಯ ದರ್ಶನ ಇರುವುದಿಲ್ಲ. ಮದ್ಯಾಹ್ನ 12 ಗಂಟೆಗೆ ವಿಧಿವಿಧಾನದ ಮೂಲಕ ಹಾಸನಾಂಬೆ ದೇವಿಯ ಗರ್ಭಗುಡಿಯ ಬಾಗಿಲು ಹಾಕಲಾಗುವುದು ಎಂದು ಮಾಹಿತಿ ನೀಡಿದರು.