ಲಕ್ನೋ:- ಪ್ರಸಕ್ತ ವರ್ಷದಲ್ಲಿ ಬಂಜೆತನ ಪ್ರಕರಣಗಳು ಹೆಚ್ಚಾಗುತ್ತಿದೆ. ಮಕ್ಕಳಿಗಾಗಿ ಎಷ್ಟೋ ಮಹಿಳೆಯರು ಅವರು ಕಟ್ಟಡ ಹರಕೆ ಇಲ್ಲ, ಬೇಡದ ದೇವರಿಲ್ಲ. ಆದರೆ ಇನ್ನೂ ಕೆಲವು ಮಂದಿಗೆ ಬೇಡ ಅಂದರೂ ದೇವರು ಮಕ್ಕಳು ಕರುಣಿಸ್ತಾನೆ. ಆದ್ರೆ ಅವರುಗಳನ್ನು ನೋಡಿಕೊಳ್ಳೋ ಯೋಗ್ಯತೆ ಕೆಲವರಿಗೆ ಇರಲ್ಲ. ಮಕ್ಕಳನ್ನು ಬೇಕಾಬಿಟ್ಟಿ ನೋಡುತ್ತಾರೆ.
ಅದರಂತೆ ಇಲ್ಲೋರ್ವ ಮಹಾತಾಯಿ 6 ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಪರಾರಿ ಆಗಿದ್ದಾಳೆ. ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ಮಹಾತಾಯಿಯೊಬ್ಬಳು ಭಿಕ್ಷುಕನೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ.
ಸುಮಾರು 36 ವರ್ಷದ ಮಹಿಳೆ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಸುಖೀ ಜೀವನ ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೇಮಾಂಕುರವಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ.
ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಾಣಿಸದೇ ಆತಂಕಗೊಂಡ ಪತಿ ರಾಜು ಪೊಲೀಸ್ ಮೊರೆ ಹೋಗಿದ್ದಾರೆ. ತನ್ನ ಪತ್ನಿಯನ್ನು ಯಾರೋ ಅಪಹರಿಸಿದ್ದಾರೆ ಎಂದು ರಾಜು ದೂರು ನೀಡಿದ್ದರು. ಪತಿಯ ದೂರು ಆಧರಿಸಿ ತನಿಖೆಗಿಳಿದ ಪೊಲೀಸರ ಎದುರು ಸತ್ಯದ ಅನಾವರಣವಾಗಿದೆ.
ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ರಾಜೇಶ್ವರಿ ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷುಕನೊಂದಿಗೆ ಪತ್ತೆಯಾಗಿದ್ದಾಳೆ. ಈತ ಭಿಕ್ಷೆಯ ನೆಪದಲ್ಲಿ ಆಗಾಗಾ ಮನೆಯ ಮುಂದೆ ಬಂದು ರಾಜೇಶ್ವರಿ ಜೊತೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಹಿಳೆಗೆ ಈತನ ಮೇಲೆ ಪ್ರೀತಿಯಾಗಿದೆ ಎನ್ನಲಾಗಿದೆ.