ವಾಷಿಂಗ್ಟನ್: 27 ವರ್ಷದ ಯೂಟ್ಯೂಬರ್ ಜೇಕ್ ಪಾಲ್ ವಿರುದ್ಧ 58 ವರ್ಷದ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ ಸೋಲು ಕಂಡಿ ದ್ದಾರೆ. ಟೆಕ್ಸಾಸ್ನ ಆರ್ಲಿಂಗ್ಟನ್ನಲ್ಲಿರುವ ಎಟಿ ಅಂಡ್ ಟಿ ಕ್ರೀಡಾಂಗಣ ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು. 27 ವರ್ಷ ವಯಸ್ಸಿನ ಪಾಲ್ ಅವರು 79-73 ಅಂಕಗಳಿಂದ ಹೆವಿವೇಯ್ಡ್ ಐಕಾನ್ ಟೈಸನ್ ವಿರುದ್ಧ ಗೆಲುವು ಸಾಧಿಸಿದ್ದಾರೆ.
2024ರ ಅತಿದೊಡ್ಡ ಬಾಕ್ಸಿಂಗ್ ಫೈಟ್ ಎಂದು ಬಿಂಬಿಸಲಾಗಿದ್ದ ಈ ಹಣಾಹಣಿಯನ್ನು ಕಣ್ಣುಂಬಿಕೊಳ್ಳಲು ಟೈಸನ್ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದರು. ಸ್ಪರ್ಧೆಗೆ ಇಳಿಯಲು ಟೈಸನ್ ಅವರಿಗೆ 169 ಕೋಟಿ ರೂ. ($20 ಮಿಲಿಯನ್) ಪಾವತಿಸಲಾಗಿದೆ ಎಂದು ವರದಿಯಾಗಿದೆ. 2005ರ ನಂತರ ಅಖಾಡಕ್ಕೆ ಇಳಿದ 58 ವರ್ಷ ವಯಸ್ಸಿನ ಟೈಸನ್ ಅವರ ಪಂಚ್ಗಳು ಲಯ ಕಳೆದುಕೊಂಡ ಕಾರಣ ಪಾಲ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಹೆವಿವೇಯ್ಡ್ ಮಾಜಿ ಚಾಂಪಿಯನ್ ಟೈಸನ್ 8 ಸುತ್ತಿನ ಬೌಟ್ನ ಮೊದಲೆರಡು ಸುತ್ತುಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು.
ರೈತರೇ ಗಮನಿಸಿ.. ಬಿಳಿ ಸೇವಂತಿಗೆ ಬೆಳೆದರೆ ಒಂದು ಎಕರೆಗೆ 5 ಲಕ್ಷ ರೂ. ಲಾಭ!
ಆದರೆ, ಪಾಲ್ ಅವರು ಚುರುಕಿನ ಪಾದಚಲನೆಯ ಮೂಲಕ ಮೂರನೇ ಸುತ್ತಿನಲ್ಲೇ ಪಾಬಲ್ಯ ಮೆರೆದರು. ಎಲ್ಲಾ ಮೂರು ಕಾರ್ಡ್ಗಳಲ್ಲಿ ಪಾಲ್ ದೊಡ್ಡ ಅಂತರದಿಂದ ಜಯ ಸಾಧಿಸಿದರು. ಪಂದ್ಯದ ಮುಕ್ತಾಯದ ಬಳಿಕ ಪಾಲ್ ಅವರು ಬಾಕಿಂಗ್ಸ್ ದಂತಕತೆ ಟೈಸನ್ ಅವರಿಗೆ ನಮಸ್ಕರಿಸಿದರು. 20 ವರ್ಷಗಳ ಬಳಿಕ ಸ್ಪರ್ಧೆಗೆ ಮರಳಿದ್ದ ಟೈಸನ್ ಅವರು ತೂಕ ಪರೀಕ್ಷೆ ವೇಳೆ ಪಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು.