ಹುಬ್ಬಳ್ಳಿ : ಅಜ್ಜಿಯ ಮನೆಗೆ ಹೋದ ಯುವತಿ ಏಕಾಏಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ . 18 ವರ್ಷದ ಯುವತಿಯ ನಾಪತ್ತೆಯಿಂದೆ ಒಂದು ಲವ್ ಸ್ಟೋರಿ ಇದೆ ಎನ್ನಲಾಗುತ್ತಿದೆ. ಹುಬ್ಬಳ್ಳಿ ಚಾಲುಕ್ಯ ನಗರದ ದೀಪಕ್ ಹಾಗೂ ಶೀತಲ ದಂಪತಿಯ ಪುತ್ರಿ ಕರೀಷ್ಮಾ ಹುಬ್ಬಳ್ಳಿ ಮಹಿಳಾ ಪದವಿ ಕಾಲೇಜಿನಲ್ಲಿ ಓದಿತ್ತಿದ್ದಳು. ಮಹಾರಾಷ್ಟ್ರ ಕೊಲ್ಲಾಪುರದ ತನ್ನ ಅಜ್ಜಿಯ ಮನೆ ಹೋದವಳು, ಇದೇ ಜ. 3 ರಂದು ಏಕಾಏಕಿ ಕಾಣೆಯಾಗಿದ್ದು, ಅಂದಿನ ಇಂದಿನವರೆಗೂ ಪತ್ತೆಯಾಗಿಲ್ಲ ಅಂತಾ ತಂದೆ-ತಾಯಿ ಹುಡುಕುತ್ತಿದ್ದಾರೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ
18 ವರ್ಷ ಕರಿಷ್ಮಾ 50 ವರ್ಷದ ಪ್ರಕಾಶ್ ಜೊತೆಗೆ ಓಡಿಹೋಗಿರುವ ಅನುಮಾನ ಮೂಡಿದೆ. ಪ್ರಕಾಶ್ ಚಾಲುಕ್ಯ ನಗರದ ನಿವಾಸಿಯಾಗಿದ್ದು, ಈಗಾಗಲೇ ಮದುವೆಯಾಗಿ, ಎರಡು ಮಕ್ಕಳು ಸಹ ಇವೆ. ಹೀಗಿದ್ದರೂ ಕರಿಷ್ಮಾಗೆ ಅದೇನು ಮೋಡಿ ಮಾಡಿದ್ದಾನೋ ಗೊತ್ತಿಲ್ಲ. ಅವಳ ಜೊತೆಗೆ ಸಲುಗೆ ಬೆಳಸಿ, ಅವಳನ್ನು ಪುಸಲಾಯಿಸಿ ಅವಳ ಜೊತೆಗೆ ಹಗಲು ರಾತ್ರಿ ಫೋನ್ ನಲ್ಲಿ ಮಾತನಾಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ..
ಈ ಕುರಿತು ಕೊಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಕರಿಷ್ಮಾ ನಾಪತ್ತೆಯಾಗಿ 40 ದಿನ ಕಳೆಯುತ್ತಾ ಬಂದ್ರೂ ಯಾವುದೇ ಸುಳಿವು ಸಿಕ್ಕಿಲ್ಲ. ಆದರೆ ಕರಿಷ್ಮಾಳನ್ನು ಪ್ರಕಾಶ್ ಅಂಕಲ್ ಓಡಿಸಿಕೊಂಡು ಹೋಗಿದ್ದಾನೆ ಎನ್ನುವುದು. ತಂದೆ-ತಾಯಿ ಗಂಭೀರ ಆರೋಪ. ಹೀಗಾಗಿ ಈ ಕುರಿತು ಹುಬ್ಬಳ್ಳಿ ಕೇಶ್ವಾಪುರ ಠಾಣೆಗೆ ಪ್ರಕಾಶ್ ಮೇಲೆ ದೂರು ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.