ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಣಬೆಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೂಲ ಉತ್ಪನ್ನ ಕೊರತೆ ಹೆಚ್ಚಾಗುತ್ತಿದೆ. ಇದರಿಂದ ಬೇಡಿಕೆಯಷ್ಟು ಅಣಬೆ ಪೂರೈಕೆ ಮಾಡಲು ಅಸಾಧ್ಯವಾದ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಈ ಬಾರಿ ಶೇ.50ರಷ್ಟು ಸಬ್ಸಿಡಿ ನೀಡಿ ಅಣಬೆ ಕೃಷಿ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಅಣಬೆ ಕೃಷಿಕರಿಗೆ ಎರಡು ಬಗೆಯಲ್ಲಿ ಸಹಾಯ ಧನವನ್ನು ಶೇ.50 ಸಬ್ಸಿಡಿ ಮೂಲಕ ತೋಟಗಾರಿಕೆ ಇಲಾಖೆ ನೀಡುತ್ತಿದೆ.
ಫಲಾನುಭವಿಗಳ ಜಾಗದಲ್ಲಿ ಹಾಲಿ ಇರುವ ಕಟ್ಟಡಗಳಲ್ಲಿ , ಬಳಸದೆ ಬಾಕಿಯಿರುವ ಗೊಡಾನ್, ಫಾರಂ ಹೌಸ್, ಶೆಡ್, ಪಡಸಾಲೆ, ರೇಷ್ಮೆ ಮನೆ, ಬಳಸದೆ ಇರುವ ಕೊಟ್ಟಿಗೆ, ಹಳೆ ಮನೆ ಇತ್ಯಾದಿ ಸ್ವಚ್ಚ ಕಟ್ಟಡದಲ್ಲಿ ಅಣಬೆ ಘಟಕಕ್ಕೆ ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ದಿ ಪಡಿಸಿ ಅಣಬೆ ಬೆಳೆಯಬಹುದು.
ಕಟ್ಟಡಕ್ಕೆ ಅವಶ್ಯವಾದ ವಿದ್ಯುಚ್ಛಕ್ತಿ, ನೀರಿನ ವ್ಯವಸ್ಥೆವಿರಬೇಕು ಹಾಗೂ ತಯಾರಿ ಘಟಕ, ಕ್ರಿಮಿನಾಶಕ ಕೊಠಡಿ, ಬೀಜ ಬಿತ್ತನೆ ಕೊಠಡಿ, ಸ್ಪಾನ್ ರನ್ನಿಂಗ್ ರೂಂ ಮತ್ತು ಬೆಳೆ ಉತ್ವಾದನೆ ಕೊಠಡಿಗಳಿಗೆ ಆಂತರಿಕ ವಿನ್ಯಾಸದ ಮೂಲಕ ಅವಕಾಶ ಕಲ್ಪಿಸಿಕೊಳ್ಳಬೇಕೆಂದು ನಿಯಮ ವಿಧಿಸಲಾಗಿದೆ. ಹೀಗೆ ನಿರ್ಮಾಣವಾದ ಕಟ್ಟಡದಲ್ಲಿ ಕೃಷಿಯನ್ನು ಮಾಡುವುದಾದರೆ ಅಂತವರಿಗೆ 3ಲಕ್ಷ ರೂ ಸಹಾಯಧನ ನೀಡಲಾಗುತ್ತದೆ, ಅದರಲ್ಲಿ ಸಬ್ಸಿಡಿ ಶೇ. 50ರಷ್ಟು ಮರುಪಾವತಿ ಮಾಡಬೇಕಾಗುತ್ತದೆ. ಇದು ಮಾತ್ರವಲ್ಲದೆ ಕಟ್ಟಡ ನಿರ್ಮಿಸಲು ಗರಿಷ್ಠ ಯೋಜನಾ ವೆಚ್ಚ 10ಲಕ್ಷ ರೂ. ನೀಡಲಾಗುತ್ತಿದ್ದು, ಇದರಲ್ಲಿ 5ಲಕ್ಷ ರೂ. ಮಾತ್ರ ಮರುಪಾವತಿ ಮಾಡಬೇಕಾಗುತ್ತದೆ.
ಯೋಜನೆಯ ಕಾರ್ಯ ವಿಧಾನ: ಅಣಬೆ ಕೃಷಿಯನ್ನು ಮಾಡಲಿಚ್ಛಿಸುವವರು ಮೊದಲು ಇಲಾಖೆಗೆ ತಮ್ಮ ಕೃಷಿ ಯಾವ ಬಗೆಯದ್ದು ಎಂಬ ಯೋಜನೆಯನ್ನು ನೀಡಬೇಕು. ಆ ಯೋಜನೆಯ ಪ್ಲಾನಿಂಗ್ನ್ನು ಸವಿವರವಾಗಿ ನೀಡಿದರೆ, ಅದನ್ನು ಅಧಿಕಾರಿಗಳು ಪರಿಶೀಲನೆ ನಡೆಸಿ ಬಳಿಕ ಕೃಷಿಗೆ ಅನುಮತಿ ನೀಡಲಿದ್ದಾರೆ.
ಪ್ರಾರಂಭದ ಹಂತದಲ್ಲಿ ಕೃಷಿಯ ಖರ್ಚುನ್ನು ಕೃಷಿಕರೆ ಭರಿಸಬೇಕು ನಂತರ ಅಣಬೆಯು ಬೆಳೆಯುವ ಹಂತಕ್ಕೆ ಬಂದಮೇಲೆ ಇಲಾಖೆಯಿಂದ ಪರಿಶೀಲಿಸಿ ಸಹಾಯಧನವನ್ನು ನೀಡಲಾಗುತ್ತದೆ. ಈಗಾಗಲೇ ಯೋಜನೆಯಡಿ ಮೊದಲ ತೋಟಗಾರಿಕಾ ಇಲಾಖೆಯಿಂದ ಬಹುತೇಕ ಕಡೆಗಳಲ್ಲಿ ಅಣಬೆ ಕೃಷಿ ತರಬೇತಿಯನ್ನು ನೀಡಲಾಗಿದೆ.
ಅನುದಾನ ಯೋಜನೆಯ ಅವಲೋಕನ
- ಯೋಜನೆಯ ಹೆಸರು: ಅಣಬೆ ಕೃಷಿಗೆ ಸಹಾಯಧನ/ ಅನುದಾನ
- ಯೋಜನೆಯ ಮಂಜೂರಾತಿ : 01.07.2011
- ಯೋಜನೆಯ ಮೊತ್ತ ಹಂಚಿಕೆ: 10 ಲಕ್ಷದವರೆಗೆ
- ಯಾವ ಸರ್ಕಾರದ ಯೋಜನೆ: ಕೇಂದ್ರ ಸರ್ಕಾರದ ಅಡಿಯಲ್ಲಿ NHB ಕೃಷಿ ಅನುದಾನ ಯೋಜನೆಗಳು
- ಪ್ರಾಯೋಜಿತ / ವಲಯ ಯೋಜನೆ: ತೋಟಗಾರಿಕೆಯ ಸಮಗ್ರ ಅಭಿವೃದ್ಧಿ ಮಿಷನ್ (MIDH)
- ಅರ್ಜಿ ಸಲ್ಲಿಸಲು ಆನ್ ಲೈನ್ ವೆಬ್ಸೈಟ್: https://nhb.gov.in
- ಸಹಾಯವಾಣಿ ಸಂಖ್ಯೆ : ಪ್ರತಿ ರಾಜ್ಯಕ್ಕೂ ಫೋನ್ ಲೈನ್ಗಳು ವಿಭಿನ್ನವಾಗಿವೆ. ಮಾಹಿತಿ ಬೇಕಿದ್ದಲ್ಲಿ ಹತ್ತಿರದ ಕೃಷಿ ವಿಜ್ನ್ಯಾನ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರವನ್ನು ಭೇಟಿ ನೀಡಬಹುದು.
ಅಣಬೆ ಕೃಷಿ ಅನುದಾನದ ಪ್ರಯೋಜನಗಳು
- ಅಣಬೆ ಕೃಷಿ ಅನುದಾನವು, ರೈತರಿಗೆ ಅಥವಾ ಜಂಟಿ ಉದ್ಯಮಕ್ಕೆ ಲಭ್ಯವಿದೆ.
- ಅಣಬೆ ಘಟಕ ಮತ್ತು ಎರೆ ಹುಳು ಗೊಬ್ಬರ ಘಟಕ ಎರಡಕ್ಕೂ ಗಣನೀಯ ಅನುದಾನ ಸಿಗಲಿದೆ.
- ಇದು ಸಮಗ್ರ ಯೋಜನೆಯಾಗಿದ್ದು, ಇದನ್ನು ರಾಜ್ಯ ಸರ್ಕಾರ ದಿಂದ ಪಡೆಯಬಹುದು.
- ಪ್ರತಿ ಘಟಕಕ್ಕೆ ಅನುದಾನ ನೀಡಲಾಗುತ್ತದೆ, ಆದ್ದರಿಂದ ಅಗತ್ಯವಿರುವಷ್ಟು ಘಟಕಗಳನ್ನು ನೀವು ನಿರ್ಮಿಸಬಹುದು.
ಅಣಬೆ ಅನುದಾನ ಪಡೆಯಲು ನೀಡಬೇಕಿರುವ ದಾಖಲೆಗಳು
- ಘಟಕ ಪೂರ್ಣಗೊಂಡ ಪ್ರಮಾಣಪತ್ರ
- ಬ್ಯಾಂಕಿನಿಂದ ಹಣಕಾಸಿನ ಮೌಲ್ಯಮಾಪನ
- ಬ್ಯಾಂಕ್ನಿಂದ ಸಾಲ ಮಂಜೂರಾತಿ ಪತ್ರ
- ಸಾಲ ವಿತರಣೆಯ ನಿಯಮಗಳು
- ಫಲಾನುಭವಿಯ ಹೆಸರಿನಲ್ಲಿ ಹಕ್ಕು ದಾಖಲೆಗಳ ಪ್ರತಿ
- ಇತ್ತೀಚಿನ ಪಾಸ್ಪೋರ್ಟ್ ಭಾವಚಿತ್ರ
- ಯೋಜನೆಯ ಎಲ್ಲಾ ಪ್ರಮುಖ ಅಂಶಗಳನ್ನು ಒಳಗೊಂಡಿರುವ ಛಾಯಾಚಿತ್ರಗಳು
- ಖರ್ಚು ಪ್ರಮಾಣ ಪತ್ರದಲ್ಲಿ ಸರಿಯಾಗಿ ಸಹಿ ಮಾಡಬೇಕು.
- ಬ್ಯಾಂಕ್ ಅನುದಾನ ನೀಡಬೇಕಾದರೆ, ನೀವು ಹೆಚ್ಚುವರಿ ಅರ್ಜಿಯನ್ನು ಸಲ್ಲಿಸಬೇಕು.
- ಆಧಾರ್ ಕಾರ್ಡ್
- ವಿಳಾಸ ಪುರಾವೆ
- ಪಡಿತರ ಚೀಟಿ