ನವದೆಹಲಿ:– ನೈಋತ್ಯ ದೆಹಲಿಯ ಕಪಶೇರಾ ಪ್ರದೇಶದಲ್ಲಿ ಮನೆಯಲ್ಲಿ ಒಬ್ಬಳೇ ಇದ್ದ 5 ವರ್ಷದ ಬಾಲಕಿ ಮೇಲೆ ನೆರೆಮನೆಯ ಅಪ್ರಾಪ್ತ ಹುಡುಗ ಅತ್ಯಾಚಾರವೆಸಗಿದ ಘಟನೆ ಜರುಗಿದೆ.
Ikea Mall: ಶಾಪಿಂಗ್ ವೇಳೆ ಕುಸಿದು ಬಿದ್ದ ಮಾಜಿ ಸದಾನಂದ ಗೌಡ ಪತ್ನಿ; ಆಸ್ಪತ್ರೆಗೆ ದಾಖಲು!
ಸಂತ್ರಸ್ತೆಯ ಸಹೋದರನ ಸ್ನೇಹಿತನಾದ 14ರ ಹುಡುಗ ಈ ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ಬಂಧಿಸಿ ಅಬ್ಸರ್ವೇಶನ್ ಹೋಮ್ಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ
14 ವರ್ಷದ ಬಾಲಕ ಮಾಡಿದ ಅಪರಾಧದ ಬಗ್ಗೆ ಕಪಶೇರಾ ಪೊಲೀಸ್ ಠಾಣೆಯಲ್ಲಿ ಪಿಸಿಆರ್ ಕರೆ ಸ್ವೀಕರಿಸಲಾಯಿತು. ತಕ್ಷಣವೇ ದೆಹಲಿ ಪೊಲೀಸರ ತಂಡವೊಂದನ್ನು ಘಟನಾ ಸ್ಥಳಕ್ಕೆ ಕಳುಹಿಸಲಾಯಿತು. ಅಲ್ಲಿ ಸಂತ್ರಸ್ತೆ ಪೋಷಕರು ಘಟನೆಯ ಬಗ್ಗೆ ಮಾಹಿತಿ ನೀಡಿದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಬಳಿಕ ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಸಂತ್ರಸ್ತೆಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಸಂತ್ರಸ್ತೆಯನ್ನು ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದರು. ಈ ವೇಳೆ ನೆರೆಮನೆಯ ಹುಡುಗ ಕೃತ್ಯವೆಸಗಿದ್ದಾನೆ ಎಂದು ಸಂತ್ರಸ್ತೆ ಪೋಷಕರು ಆರೋಪಿಸಿದ್ದಾರೆ.