ಗುಜರಾತ್ ಟೈಟನ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ ಭರ್ಜರಿ ಜಯ ದಾಖಲಿಸಿದೆ.
ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಮೂಲಕ ಲಕ್ನೋ ತಂಡವು ನಿಗದಿತ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 163 ರನ್ ಸಿಡಿಸುವ ಮೂಲಕ ಸಾಧಾರಣ ಮೊತ್ತ ಕಲೆಹಾಕಿತು. ಆದರೆ ಈ ಮೊತ್ತ ಬೆನ್ನಟ್ಟಿದ ಗುಜರಾತ್ ಟೈಟನ್ಸ್ ತಂಡವು 18.5 ಓವರ್ಗೆ 130 ರನ್ಗೆ ಆಲೌಟ್ ಆಗುವ ಮೂಲಕ 33 ರನ್ ಗಳಿಂದ ಸೋಲನ್ನಪ್ಪಿತು.
ಒಬ್ಬನೇ ಒಬ್ಬ ವಿಕೆಟ್ ಪಡೆಯುವ ಬೌಲರ್ ಇಲ್ಲದ ಮೇಲೆ RCB ಗೆಲ್ಲಲು ಹೇಗೆ ಸಾಧ್ಯ – ಸೆಹ್ವಾಗ್ !
ಲಕ್ನೋ ನೀಡಿದ ಸಾಧರಣ ಗುಡಿಯನ್ನೂ ಬೆನ್ನಟ್ಟುವಲ್ಲಿ ಯಶಸ್ವಿಯಾಗದ ಗುಜರಾತ್ ತಂಡವು ಮತ್ತೆ ಸೋಲನ್ನಪ್ಪಿತು. ಗುಜರಾತ್ ಟೈಟನ್ಸ್ ಪರ ಬ್ಯಾಟಿಂಗ್ ನಲ್ಲಿ ಎಡವಿದ ತಂಡವು ಯಾರೊಬ್ಬರೂ ಉತ್ತಮ ಫೈಪೋಟಿ ನೀಡಲಿಲ್ಲ. ಗುಜರಾತ್ ಟೈಟನ್ಸ್ ಪರ ಸಾಯಿ ಸುದರ್ಶನ್ 23 ಎಸೆತದಲ್ಲಿ 31 ರನ್, ನಾಯಕ ಶುಭ್ಮನ್ ಗಿಲ್ 21 ಎಸೆತದಲ್ಲಿ 19 ರನ್, ಕೇನ್ ವಿಲಿಯಮ್ಸನ್ 5 ಎಸೆತದಲ್ಲಿ 1 ರನ್, ಬಿಆರ್ ಶರತ್ 5 ಎಸೆತದಲ್ಲಿ 2 ರನ್, ವಿಜಯ್ ಶಂಕರ್ 17 ಎಸೆತದಲ್ಲಿ 17 ರನ್, ದರ್ಶನ್ ನೇಲ್ಕಂಡೆ 11 ಎಸೆತದಲ್ಲಿ 12 ರನ್, ರಶೀಧ್ ಖಾನ್ 3 ಎಸೆತದಲ್ಲಿ ಶೂನ್ಯ, ಉಮೇಶ್ ಯಾದವ್ 4 ಎಸೆತದಲ್ಲಿ 2 ರನ್ ಗಳಿಸಿ ಪೆವೆಲಿಯನ್ ಸೇರಿದರು.
ಈ ಮೂಲಕ ಯಾವೊಬ್ಬ ಆಟಗಾರನೂ ಲಕ್ನೋ ಬೌಲರ್ಗೆ ತಕ್ಕ ಪ್ರತ್ಯುತ್ತರ ನೀಡಲು ಸಾಧ್ಯವಾಗಲಿಲ್ಲ. ಇದೇ ವೇಳೆ ಲಕ್ನೋ ಪರ ಕೃನಲ್ ಪಾಂಡ್ಯ 4 ಓವರ್ಗೆ 11 ರನ್ ನೀಡಿ 3 ವಿಕೆಟ್ ಪಡೆದರೆ, ಯಶ್ ಠಾಕೂರ್ ಸಹ 3.5 ಓವರ್ಗೆ 30 ರನ್ ನೀಡಿ 5 ವಿಕೆಟ್ ಪಡೆದರು. ರವಿ ಬಿಷ್ಣೋಯ್ 1 ವಿಕೆಟ್ ಮತ್ತು ನವೀನ್ ಉಲ್ ಹಕ್ 1 ವಿಕೆಟ್ ಪಡೆದು ಅಬ್ಬರಿಸಿದರು. ಇದರಿಂದಾಗಿ ಕಡಿಮೆ ಸ್ಕೋರ್ ಇದ್ದರೂ ಸಹ ತಂಡವನ್ನು ಗೆಲ್ಲಿಸುವಲ್ಲಿ ತಂಡದ ಬೌಲರ್ ಗಳು ಸಹಾಯಕರಾದರು