ಹುಬ್ಬಳ್ಳಿ: ಮಹಿಳೆಯರಿಗೆ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣದ “ಶಕ್ತಿ” ಯೋಜನೆ ಐದು ತಿಂಗಳು ಪೂರೈಸಿದೆ. ವಾ.ಕ.ರ.ಸಾ.ಸಂಸ್ಥೆಯ ಬಸ್ಸುಗಳಲ್ಲಿ ಒಟ್ಟು 21.76 ಕೋಟಿ ಮಹಿಳೆಯರು ಉಚಿತ ಸಂಚಾರ ಮಾಡಿದ್ದು, ಪ್ರಯಾಣದ ಟಿಕೆಟ್ ಮೌಲ್ಯ ರೂ.556.41 ಕೋಟಿ ಗಳಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ತಿಳಿಸಿದ್ದಾರೆ.
ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದಿಂದ ಆರಂಭಿಸಲಾಗಿರುವ ಕರ್ನಾಟಕದ ಮಹಿಳೆಯರಿಗೆ ಸರ್ಕಾರಿ ಬಸ್ಸಿನಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣದ “ಶಕ್ತಿ” ಯೋಜನೆಗೆ ನಿರೀಕ್ಷೆಗೂ ಮೀರಿ ಭಾರಿ ಸ್ಪಂದನೆ ವ್ಯಕ್ತವಾಗಿದೆ. ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಯಶಸ್ವಿಯಾಗಿ ಮುಂದುವರೆದಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಆರು ಜಿಲ್ಲೆಗಳ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಜೂನ್ 11ರಿಂದ ನವೆಂಬರ್ 10 ರವರೆಗೆ ಐದು ತಿಂಗಳ ಅವಧಿಯಲ್ಲಿ ಒಟ್ಟು 21,76,17,297 ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಪ್ರಯಾಣದ ಟಿಕೆಟ್ ಗಳ ಮೌಲ್ಯ ರೂ.556,41,82,443 ಗಳಾಗಿದೆ.
ಸಂಸ್ಥೆಯ ವ್ಯಾಪ್ತಿಯ ಧಾರವಾಡ, ಬೆಳಗಾವಿ, ಬಾಗಲಕೋಟೆ, ಗದಗ, ಹಾವೇರಿ ಹಾಗೂ ಉತ್ತರ ಕನ್ನಡ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿನ 9 ಸಾರಿಗೆ ವಿಭಾಗಗಳ ಬಸ್ಸುಗಳಲ್ಲಿ ಶಕ್ತಿ ಯೋಜನೆಯಲ್ಲಿ ಇಲ್ಲಿಯವರೆಗೆ ಉಚಿತ ಪ್ರಯಾಣ ಮಾಡಿದ ಮಹಿಳೆಯರು ಹಾಗೂ ಪ್ರಯಾಣದ ಟಿಕೆಟ್ ಮೌಲ್ಯದ ಮಾಹಿತಿ.
ವಿಭಾಗ : ಮಹಿಳೆಯರು(ಕೋಟಿಗಳಲ್ಲಿ) /
ಪ್ರಯಾಣದ ಟಿಕೆಟ್ ಮೌಲ್ಯ(ಕೋಟಿಗಳಲ್ಲಿ)
ಹು-ಧಾ ನಗರ ಸಾರಿಗೆ 2.91 / 35.53
ಹುಬ್ಬಳ್ಳಿ ಗ್ರಾಮಾಂತರ 1.46 / 53.19
ಧಾರವಾಡ 1.73 / 47.45
ಬೆಳಗಾವಿ 3.37/ 69.76
ಚಿಕ್ಕೋಡಿ 2.98/ 75.61
ಬಾಗಲಕೋಟೆ 2.73 / 86.37
ಗದಗ 2.16 / 66.22
ಹಾವೇರಿ 2.41/ 67.16
ಉತ್ತರ ಕನ್ನಡ 1.99 / 55.13
ಜೂನ್ 11ರಂದು ಶಕ್ತಿ ಯೋಜನೆ ಜಾರಿಯಾಗಿದ್ದು ಸಾರ್ವಜನಿಕರ ಸಹಭಾಗಿತ್ವ ಹಾಗೂ ಸಹಕಾರದಿಂದ ಐದು ತಿಂಗಳು ಪೂರೈಸಿದ್ದು ಯಶಸ್ವಿಯಾಗಿ ಮುಂದುವರೆದಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ವ್ಯವಸ್ಥಾಪಕ ಭರತ್. ಎಸ್. ತಿಳಿಸಿದ್ದಾರೆ.