ಗದಗ:- ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವಿರಪಾಪೂರದಲ್ಲಿ ಮದುವೆಯಾಗುವಂತೆ 47 ವರ್ಷದ ಅಂಕಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 19 ವರ್ಷದ ಹುಡುಗಿ ಸೂಸೈಡ್ ಮಾಡಿಕೊಂಡ ಘಟನೆ ಜರುಗಿದೆ.
Karnataka Bandh: ಕರ್ನಾಟಕ ಬಂದ್ಗೆ ಚಿತ್ರರಂಗ ಬೆಂಬಲ; ಆದ್ರೆ ಚಿತ್ರೀಕರಣ ನಿಲ್ಲಿಸಲ್ಲ – ಫಿಲಂ ಚೇಂಬರ್!
ವಂದನಾ ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿನಿ. 47 ವರ್ಷದ ಕಿರಣ ಕಾರಬಾರಿ ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದೆ. ಮೃತ ವಂದನಾ, ಜಿಮ್ಸ್ ನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೇ ಗದಗನ ಬೆಟಗೇರಿಯ ವಸಂತಸಿಂಗ್ ಜಮಾದಾರ ಬಡಾವಣೆಯ ಸಮಾಜಕಲ್ಯಾಣ ಹಾಸ್ಟೆಲ್ ನಲ್ಲಿ ಇದ್ದಳು. ಆದರೆ ಈಕೆಗೆ 47 ವರ್ಷದ ಕಿರಣ ಎಂಬಾತ ಮದುವೆಯಾಗುವಂತೆ ಕಿರುಕುಳ ಕೊಡುತ್ತಿದ್ದ. ಅಷ್ಟೇ ಅಲ್ಲ ನೀನು ನನ್ನ ಮದುವೆ ಆಗದಿದ್ದರೆ ಫೋಟೋಸ್ ಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಈ ಕಿರುಕುಳ ತಾಳಲಾರದೇ ವಂದನಾ ತಾನಿದ್ದ ಹಾಸ್ಟೆಲ್ ನಲ್ಲೇ ಪಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಬೆಟಗೇರಿ ಪೊಲೀಸ್ ಠಾಣೆಗೆ ಪ್ರಕರಣ ದಾಖಲಾಗಿದೆ.