ಬೆಂಗಳೂರು: 2024 ವರ್ಷ ಮುಗಿದಿದೆ, 2025ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶ್ವದಾದ್ಯಂತ ಗ್ರ್ಯಾಂಡ್ ವೆಲ್ಕಮ್ ಮಾಡಿಯೂ ಆಯ್ತು. ಹೊಸ ವರ್ಷವನ್ನು ಎಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಜನರು ಕುಡಿದು, ಕುಣಿದು ಹೊಸ ವರ್ಷದ ಹರುಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ರು. ಇನ್ನೂ ಇದರ ನಡುವೆ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.
ಹೌದು ರಾಜ್ಯ ಔಷಧ ನಿಯಂತ್ರಣ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ 400 ಔಷಧಿಗಳ ಗುಣಮಟ್ಟ ಕಳಪೆ ಎಂಬುದು ಬಹಿರಂಗವಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಔಷಧಿಗಳ ಗುಣಮಟ್ಟ ಪರೀಕ್ಷೆ ಮಾಡಲಾಗಿತ್ತು. ರಾಜ್ಯದ ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು ಮತ್ತು ಕ್ಲಿನಿಕ್ಗಳಲ್ಲಿ ಬಳಸುವ ಔಷಧಿಗಳ ಗುಣಮಟ್ಟ ಪರೀಕ್ಷಿಸಲಾಗಿತ್ತು.
ಮಲೇಷ್ಯಾ ಮೂಲದ ಪೌಷ್ಟಿಕಯುಕ್ತ ರಂಬುಟಾನ್ ಹಣ್ಣು ಕರ್ನಾಟಕದಲ್ಲಿಯೂ ಬೆಳೆಯಬಹುದು..! ಹೇಗೆ ಗೊತ್ತಾ..?
2023-24ನೇ ಸಾಲಿನಲ್ಲಿ 7,420 ಔಷಧಿಗಳ ಮಾದರಿಗಳನ್ನ ಪರೀಕ್ಷೆಗೆ ಒಳಪಡಿಸಲಾಗಿದೆ. 285 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿಯಲ್ಲಿ ತಿಳಿಸಲಾಗಿದೆ. 2024-25ನೇ ಸಾಲಿನಲ್ಲಿ 3,636 ಔಷಧಿಗಳ ಪರೀಕ್ಷೆಗೆ ಒಳಪಡಿಸಲಾಗಿದೆ.
ಅದರಲ್ಲಿ 177 ಔಷಧಿಗಳು ಪ್ರಮಾಣಿತ ಗುಣಮಟ್ಟ ಇಲ್ಲ ಅಂತಾ ವರದಿ ಬಂದಿದೆ. ಔಷಧಿಗಳನ್ನ ಮಾರುಕಟ್ಟೆಗೆ ಸರಬರಾಜು ಮಾಡುವ ಮುನ್ನ ಕಂಪನಿಗಳು ಪ್ರಮಾಣಿತ ಗುಣಮಟ್ಟ ಪರೀಕ್ಷೆ ಮಾಡಿಸಬೇಕು. ಆದರೆ, ಕೆಲ ಕಂಪನಿಗಳು ಪರೀಕ್ಷೆಗೆ ಒಳಪಡಿಸದೇ ನಿರ್ಲಕ್ಷ್ಯ ತೋರಿವೆ. ಔಷಧದ ಪ್ರಮಾಣಿತ ಗುಣಮಟ್ಟ ಹೊಂದಿರದ ಕಂಪನಿಗಳ ವಿರುದ್ಧ ಕ್ರಮಕ್ಕೆ ಚಿಂತನೆ ನಡೆಸಲಾಗಿದೆ.