ವಿಜಯಪುರ:- ಕೃಷಿ ವಿಸ್ತೀರ್ಣಾಧಿಕಾರಿಯ ಕರ್ಮಕಾಂಡ ಬಯಲಾಗಿದ್ದು, 40 ಲಕ್ಷ ಪಂಗನಾಮ ಹಾಕಿರುವ ಆರೋಪ ಕೇಳಿ ಬಂದಿದೆ.
ಮೊಬೈಲ್ಗಳಲ್ಲಿ ಕ್ಲೌಡ್ ಮಾರಾಟ ಮಾಡುವ ಕಂಪನಿ ಹೆಸರಿನಲ್ಲಿ ಸರ್ಕಾರಿ ನೌಕರ ಲಕ್ಷ ಲಕ್ಷ ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಆರೋಪಿಯನ್ನು ರವೀಂದ್ರ ಬೆಳ್ಳಿ ಎಂದು ಗುರುತಿಸಲಾಗಿದ್ದು, ನಗರದ ಹೊರವಲಯದಲ್ಲಿರುವ ಕೃಷಿ ವಿಶ್ವವಿದ್ಯಾಲಯದಲ್ಲಿ ಕೃಷಿ ವಿಸ್ತೀರ್ಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ದಿ ಬ್ಯಾಂಕ್ ಎಂಬ ಕಂಪನಿ ಹೆಸರಿನಲ್ಲಿ ಹಣ ಹೂಡಿಕೆ ಮಾಡುವುದಾಗಿ ಬಸವರಾಜ ಜಿರಾಳೆ ಎಂಬುವವರಿಗೆ 40 ಲಕ್ಷ ರೂ. ಹಣ ವಂಚನೆ ಮಾಡಿದ್ದಾರೆ. ಈ ಕುರಿತು ಬಸವರಾಜ ಜಿರಾಳೆ ಅ.17 ರಂದು ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರವೀಂದ್ರ ಬೆಳ್ಳಿ ಎ1 ಆರೋಪಿಯಾಗಿದ್ದು, ಒಟ್ಟು 7 ಜನರ ಮೇಲೆ ದೂರು ದಾಖಲಿಸಿದ್ದಾರೆ.
ದಿ ಬ್ಯಾಂಕ್ ಎಂಬ ಕಂಪನಿ ಮೊಬೈಲ್ ಸ್ಟೋರೇಜ್ಗಾಗಿ ಕ್ಲೌಡ್ ಸೇಲ್ಸ್ ಮಾಡುತ್ತದೆ. ಇದೊಂದು ಚೈನ್ ಸಿಸ್ಟಮ್ ವ್ಯಾಪಾರವಾಗಿದ್ದು, ದೂರುದಾರರಿಂದ 40 ಲಕ್ಷ ರೂ.ಗಳನ್ನು ಹೂಡಿಕೆಗಾಗಿ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.