ಬೆಂಗಳೂರು:- 2024-25ನೇ ಶೈಕ್ಷಣಿಕ ಸಾಲಿನ ಬಿಬಿಎಂಪಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಇಳಿಕೆ ಕಂಡಿದೆ.
3 ವರ್ಷದ ಕಂದನಿಗೆ ಕಚ್ಚಿದ ನಾಗರಹಾವು.. ವೈದ್ಯರ ವಿರುದ್ಧ ನಿರ್ಲಕ್ಷ್ಯ ಬಾಲಕ ಸಾವು..!?
ಕಳೆದ ಬಾರಿಗಿಂತ ಈ ಬಾರಿಯ ದಾಖಲಾತಿಯಲ್ಲಿ ಸುಮಾರು ಶೇ40 ರಷ್ಟು ಕುಸಿತ ಕಂಡಿದೆ. ಹೌದು, ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ 2024-25ನೇ ಸಾಲಿನ ಶೈಕ್ಷಣಿಕ ಸಾಲಿನ ದಾಖಲಾತಿ ಮುಗಿಯುವ ಹಂತಕ್ಕೆ ಬಂದಿದೆ. ಆದರೆ, ಈ ಬಾರಿ ದಾಖಲಾತಿ ಪ್ರಮಾಣ ಭಾರಿ ಇಳಿಕೆಯಾಗಿದೆ.
ಕೊರೊನಾ ಸಂದರ್ಭದಲ್ಲಿ ಬಿಬಿಎಂಪಿ ಶಾಲಾ ಕಾಲೇಜುಗಳಲ್ಲಿ ದಾಖಲಾತಿ ಪ್ರಮಾಣ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ಕಳೆದ 2023-24ನೇ ಸಾಲಿನಲ್ಲಿ ಬರೋಬ್ಬರಿ 25 ಸಾವಿರಕ್ಕೂ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ದಾಖಲಾತಿ ಪಡೆದುಕೊಂಡಿದ್ದರು. ಆದರೆ, ಈ ಬಾರಿ ಕೇವಲ 19,974 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಬಹುತೇಕ ಶೇ.40ರಷ್ಟು ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗಿದೆ.
ಈ ಬಾರಿಯ ದಾಖಲಾತಿ
ನರ್ಸರಿ ಶಾಲೆ: 311
ಪ್ರಾಥಮಿಕ ಶಾಲೆ: 3674
ಪ್ರೌಢ ಶಾಲೆ: 6691
ಪಿಯು ಕಾಲೇಜು: 4711
ಡಿಗ್ರಿ ಕಾಲೇಜು: 1689\
ಪಿಜಿ ಕಾಲೇಜು: 98
ಒಟ್ಟು ದಾಖಲಾತಿ: 19,974 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.
ಬಿಬಿಎಂಪಿ ತನ್ನ ವ್ಯಾಪ್ತಿಯ ಶಾಲೆಗಳನ್ನು ನಿರ್ವಹಣೆ ಮಾಡುವುದರಲ್ಲಿ ಎಡವಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯ. ಹಲವು ಭ್ರಷ್ಟಾಚಾರಗಳು ಹಾಗೂ ಮಕ್ಕಳಿಗೆ ಸಮಪರ್ಕವಾಗಿ ಮೂಲಭೂತ ಸೌಕರ್ಯ ಕೊಡುವುದರಲ್ಲಿ ಪಾಲಿಕೆ ಎಡವಿದೆ ಎನ್ನುವ ಆರೋಪವಿದೆ.