ಮಂಡ್ಯ: ಹಾಡು ಹಗಲೇ ಕಾರಿನ ಗ್ಲಾಸ್ ಒಡೆದು ಕಳ್ಳತನ ಮಾಡಿ 4.5 ಲಕ್ಷ ಹಣ ಎಗರಿಸಿ ಪರಾರಿಯಾಗಿರುವ ಘಟನೆ ಮಂಡ್ಯದ ನಗರಸಭೆ ಆವರಣದಲ್ಲಿ ನಡೆದಿದೆ. ಚಿನಕುರಳಿ ಗ್ರಾಮದ ಪರಮೇಶ್ ಹಣ ಕಳೆದುಕೊಂಡ ನತದೃಷ್ಟನಾಗಿದ್ದು, ನಗರಸಭೆ ಆವರಣದಲ್ಲಿ ಕಾರು ನಿಲ್ಲಿಸಿ SBI ಬ್ಯಾಂಕ್ ಗೆ ಕೆಲಸದ ನಿಮಿತ್ತ ಹೋಗಿದ್ದರು.
ಕಾರಿನಲ್ಲಿ ಹಣವಿಟ್ಟಿದ್ದನ್ನ ಗಮನಿಸಿದ ಖತರ್ನಾಕ್ ಕಳ್ಳರು ಬ್ರೀಜಾ ಕಾರಿನಲ್ಲಿದ್ದ ಹಣವನ್ನ ಎಗರಿಸಿದ್ದಾರೆ. ಜಮೀನು ರಿಜಿಸ್ಟರ್ ಮಾಡಿಸಿ ರಿಜಿಸ್ಟರ್ ಕಚೇರಿ ಬಳಿಯಿಂದ ಹಣ ಪಡೆದು ನಗರಸಭೆ ಬಳಿ ಬಂದಿದ್ದರು. ಬೇರೆಯವರಿಗೆ ನೀಡಬೇಕಿದ್ದ ಹಣ ಕಳೆದುಕೊಂಡ ಪರಮೇಶ್ ಗೋಳಾಡುತ್ತಿದ್ದಾರೆ. ಇನ್ನೂ ಈ ಘಟನೆ ಸಂಬಂಧ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.