ದಕ್ಷಿಣ ಚೀನಾದ ಝುಹೈನಲ್ಲಿರುವ ಕ್ರೀಡಾ ಕೇಂದ್ರದಲ್ಲಿ ವ್ಯಾಯಾಮ ಮಾಡುತ್ತಿದ್ದ ಜನರ ಮೇಲೆ ವ್ಯಕ್ತಿಯೋರ್ವ ಉದ್ದೇಶಪೂರ್ವಕವಾಗಿ ಕಾರನ್ನು ನುಗ್ಗಿಸಿದ್ದಾನೆ.ಪರಿಣಾಮ 35 ಮಂದಿ ಮೃತಪಟ್ಟಿದ್ದು 43 ಜನ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೀಪಲ್ಸ್ ಲಿಬರೇಶನ್ ಆರ್ಮಿ ನಗರದಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುವ ದೇಶದ ಪ್ರಮುಖ ವೈಮಾನಿಕ ಪ್ರದರ್ಶನದ ಮುನ್ನಾದಿನದಂದು ಸೋಮವಾರ ತಡರಾತ್ರಿ ಈ ದಾಳಿ ನಡೆದಿದ್ದು, ದಕ್ಷಿಣ ಚೀನಾದ ಝುಹೈ ನಗರದ ಕ್ರೀಡಾ ಕೇಂದ್ರಕ್ಕೆ ಕಾರು ನುಗ್ಗಿಸಿದ 62 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯದ ಬಳಿಕ ಚಾಲಕ ಚಾಕು ಬಳಸಿ ಆತ್ಮಹತ್ಯೆಗೆ ಮುಂದಾಗಿದ್ದ ಎಂದು ವರದಿಯಾಗಿದೆ.
ಫ್ಯಾನ್ ಕಾರಿನಲ್ಲಿ ಚಾಕು ಪತ್ತೆಯಾಗಿದೆ. ಆತನ ಕುತ್ತಿಗೆಗೆ ಗಾಯಗಳಾಗಿದ್ದು, ಸ್ವಯಂ-ಹಾನಿ ಮಾಡಿಕೊಂಡಿರಬಹುದು ಎಂದು ಭಾವಿಸಲಾಗಿದೆ. ಆರೋಪಿ ಪ್ರಜ್ಞಾಹೀನರಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.