ಹಾವೇರಿ:- ಕಳೆದ ನಾಲ್ಕು ದಿನಗಳ ಹಿಂದೆ ಇಲ್ಲಿನ ಬಸವೇಶ್ವರ ನಗರದಲ್ಲಿ ನಡೆದಿದ್ದ ಕಾರಿನ ಗಾಜು ಒಡೆದು 33 ಲಕ್ಷ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓಜಿ ಕುಪ್ಪಂ ಗ್ಯಾಂಗ್ ನಿಂದ ಈ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.
ಕಾಪು ಹೊಸ ಮಾರಿಗುಡಿಗೆ ಭೇಟಿ ಕೊಟ್ಟ ರಕ್ಷಿತ್! ಮಾರಿಯಮ್ಮನಿಗೆ ವಿಶೇಷ ಪೂಜೆ
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ ಪೊಲೀಸರು, ಇದೇ ಗ್ಯಾಂಗ್ ನ ಓರ್ವನನ್ನು ಅರೆಸ್ಟ್ ಮಾಡಿದ್ದಾರೆ. ಎಜಿ ಜಗದೀಶ್ ಬಂಧಿತ ಆರೋಪಿ. ಕಳೆದ ನಾಲ್ಕು ದಿನಗಳ ಹಿಂದೆ ಕಾರಿನ ಗಾಜು ಒಡೆದು 33 ಲಕ್ಷ ಹಣ ದೋಚಿ ಆರೋಪಿಗಳು ಪರಾರಿಯಾಗಿದ್ದರು. ಕಳ್ಳರ ಕೈಚಳಕದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿಯಿಂದ 30 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಸಿವಿಲ್ ಕಾಂಟ್ರ್ಯಾಕ್ಟರ್ ಸಂತೋಷ್ ಹಾವೇರಿಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ದೈನಂದಿನ ವ್ಯವಹಾರಕ್ಕಾಗಿ 33 ಲಕ್ಷ ರೂ. ಹಣವನ್ನು ಸಂಬಂಧಿಕರ ಖಾತೆಯಿಂದ ಚೆಕ್ ಮುಖಾಂತರ ಡ್ರಾ ಮಾಡಿಕೊಂಡಿದ್ದರು. ಡ್ರಾ ಮಾಡಿದ ಹಣವನ್ನು ಕಾರಿನ ಹಿಂಭಾಗದ ಸೀಟಿನಲ್ಲಿಟ್ಟಿದ್ದರು.
ಇದನ್ನು ನೋಡಿದ ಆರೋಪಿಗಳು, ಯೂನಿಯನ್ ಬ್ಯಾಂಕ್ ನಿಂದ ಪಾಲೋ ಮಾಡಿ ಕೃತ್ಯ ಬಸವೇಶ್ವರ ನಗರದಲ್ಲಿ ಕೃತ್ಯ ಎಸಗಿದ್ದಾರೆ. ಉಳಿದವರಿಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.